×
Ad

1ಕೋಟಿ 80 ಸಾವಿರ ರೂ ಸಂಬಳ, ಆದರೆ ನೌಕರಿಗೆ ವೈದ್ಯರಿಲ್ಲ!

Update: 2016-03-01 19:27 IST

ಹೊಸದಿಲ್ಲಿ,ಮಾರ್ಚ್.1: ನ್ಯೂಝಿಲೆಂಡ್‌ನ ಉತ್ತರ ದ್ವೀಪದಲ್ಲಿ ತೊಕಾರೋದಲ್ಲಿ ಒಂದು ಕ್ಲಿನಿಕ್ ಇದೆ. ಇಲ್ಲಿ ಯಾವುದೇ ವೈದ್ಯರಿಲ್ಲ. ಪ್ರತಿವರ್ಷ ಈ ಕ್ಲಿನಿಕ್‌ನಲ್ಲಿ 400,000 ನ್ಯೂಝಿಲೆಂಡ್ ಡಾಲರ್(18092706ರೂ.) ಆದಾಯ ಬರುತ್ತಿದೆ. ಇದು ಯಾರನ್ನೂ ಆಶ್ಚರ್ಯಚಕಿತಗೊಳಿಸುವ ಆದಾಯದ ಅಂಕಿ ಅಂಶವಾಗಿದೆ.

ಆದರೆ ಇಲ್ಲಿ ಯಾರೂ ನೌಕರಿ ಮಾಡಲು ಸಿದ್ಧರಿಲ್ಲ. ಟೊಕಾರೊ ಹೆಲ್ತ್ ಕ್ಲಿನಿಕ್ ಮಾಲಕ ಡಾ.ಹೆಲನ್ ಕೆನ್ನಿ ಯಾವುದೇವೈದ್ಯರು ಸಿಗದಿರುವುದರಿಂದ ತುಂಬಾ ಹತಾಶರಾಗಿದ್ದಾರೆ. ಒಂದು ವರ್ಷದಿಂದ ಒಬ್ಬರೇ ಈ ಕ್ಲಿನಿಕ್‌ನ್ನು ನಡೆಸುತ್ತಾ ಬಂದಿದ್ದಾರೆ. ಮತ್ತು ವೈದ್ಯರನ್ನು ಹುಡುಕುತ್ತಿದ್ದಾರೆ. ಹೆಚ್ಚು ಸಂಬಳ ಕೊಡುವ ಕೊಡುಗೆ ನೀಡಿಯೂ ಇಲ್ಲಿನ ನೌಕರಿಗೆ ಯಾರು ಬಂದಿಲ್ಲ ಎಂದು ವೈದ್ಯ ಬೆನ್ನಿ ಹೇಳುತ್ತಾರೆ. ವರ್ಕ್ ಫ್ರೀ ವೀಕೆಂಡ್, ನೋ ನೈಟ್ ಶಿಫ್ಟ್ ಮತ್ತು ಕೋ ಅನರ್‌ಶಿಫ್ ಕೊಡುಗೆ ಮುಂದಿಟ್ಟರೂ ಯಾರೂ ಕೆಲಸ ಮಾಡಲು ಮನಸ್ಸು ಮಾಡಿಲ್ಲ ಎಂಬುದು ಅವರ ನೋವು.

ವೈದ್ಯ ಬೆನ್ನಿಗೆ ಅರುವತ್ತು ವರ್ಷ ವಯಸ್ಸಾಗಿದ್ದೂಸುಮಾರು ಅವರ ಬಳಿಗೆ ಬರುವ ಆರುನೂರು ರೋಗಿಗಳಿಗೆ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ ಒಂದು ವರ್ಷ ಒಂದು ದಿನ ರಜೆಯೂ ಇಲ್ಲದೆ ಸೇವೆಯಲ್ಲಿ ಅವರು ನಿರತರಾಗಿದ್ದರು. ಯುವವೈದ್ಯರು ಈ ದ್ವೀಪದಲ್ಲಿ ಪ್ರಾಕ್ಟೀಸ್ ಮಾಡಲು ಇಷ್ಟ ಪಡುವುದಿಲ್ಲ. ಇದೊಂದು ಗ್ರಾಮೀಣ ಕ್ಷೇತ್ರವಾಗಿರುವುದು ಕಾರಣವಾಗಿದೆ. ಬದಲಿ ವೈದ್ಯರಿಲ್ಲದೆ ಸ್ವತಃ ಬೆನ್ನಿ ಬೆಳಗ್ಗೆ 8:30ರಿಂದ ಸಂಜೆ ಆರು ಗಂಟೆವರೆಗೆ ಮಧ್ಯಾಹ್ನದ ಊಟಕ್ಕೂ ಪುರುಸೊತ್ತಿಲ್ಲದೆ ಕೆಲಸ ಮಾಡಬೇಕಾಗಿದೆ ಎಂದು ಅವರು ಬೇಸರ ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News