ಸಾಧ್ವಿ ಪ್ರಾಚಿ ಸ್ವಯಂ ಘೋಷಿತ ಹಿಂದುತ್ವದ ನಾಯಕಿ
Update: 2016-03-02 17:37 IST
ಹೊಸದಿಲ್ಲಿ, ಮಾರ್ಚ್.2: ತೀವ್ರ ಹಿಂದುತ್ವ ನಿಲುವನ್ನು ನಿರಂತರ ವ್ಯಕ್ತಪಡಿಸುತ್ತಿರುವ ವಿವಾದಿತ ಹೇಳಿಕೆಗಳಿಂದ ಪ್ರಸಿದ್ಧರಾದ ಸಾಧ್ವಿಪ್ರಾಚಿ ತಮ್ಮ ನಾಯಕಿಯಲ್ಲವೆಂದು ವಿಶ್ವ ಹಿಂದೂ ಪರಿಷತ್ ಹೇಳಿದೆ. ಸಾಧ್ವಿ ವಿಹಿಂಪ ನಾಯಕಿಯೆಂದು ವಾರ್ತೆಗಳಾಗುತ್ತವೆ. ಆದರೆ ಅವರು ವಿಹಿಂಪದ ನಾಯಕಿಯೋ ವಕ್ತಾರೆಯೋ ಇನ್ನುಯಾವುದೋ ಪಧಾಧಿಕಾರಿಯೋ ಅಲ್ಲ ಎಂದು ವಿಹಿಂಪದ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್ ಹೇಳಿದ್ದಾರೆ.
ಸುದೀರ್ಘಕಾಲದಿಂದ ಪ್ರಾಚಿ ರಾಜಕೀಯದಲ್ಲಿದ್ದಾರೆ. ಅವರು ಪಕ್ಷವೊಂದರ ಟಿಕೆಟ್‌ನಲ್ಲಿ ಸ್ಪರ್ಧಿಸಿದ ನಾಯಕಿಯಾಗಿದ್ದಾರೆ ಎಂದಿರುವ ಸುರೇಂದ್ರ ಜೈನ್ ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ವಿಹಿಂಪದಲ್ಲಿ ಪದಾಧಿಕಾರಿಗಳಾಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.