ಮುಂಬೈ:ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದ ಸಿಐಎಸ್‌ಎಫ್ ಜವಾನ!
ಮುಂಬೈ, ಮಾರ್ಚ್.2: ಮಹಾರಾಷ್ಟ್ರದಲ್ಲಿ ಸಹೋದ್ಯೋಗಿಯೊಬ್ಬನ ಗುಂಡೇಟಿಗೀಡಾಗಿ ಸಿಐಎಸೆಫ್ ಜವಾನ ಸಹಿತ ಇಬ್ಬರು ಮೃತರಾಗಿದ್ದಾರೆ. ಕೇರಳ ಮೂಲದ ರನೀಷ್(28), ಎಎಸ್ಸೈ ಬಾಲ ಗಣಪತಿ ಶಿಂಧೆ(58) ಮೃತರಾಗಿದ್ದರೆ. ಗುಂಡುಹಾರಿಸಿದಾತನ ಪತ್ನಿಯೂ ಗಾಯಗೊಂಡಿದ್ದಾರೆ.
ರತ್ನಗಿರಿ ಗ್ಯಾಸ್ ಆಂಡ್ ಪವರ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಭದ್ರತೆ ಕರ್ತವ್ಯದಲ್ಲಿದ್ದ ಕಾನ್‌ಸ್ಟೇಬಲ್ ಹರೀಶ್ ಕುಮಾರ್ ಎಂಬಾತ ಸಹೋದ್ಯೋಗಿಗಳ ಮೇಲೆ ನಿನ್ನೆ ರಾತ್ರಿ ಗುಂಡು ಹಾರಿಸಿದ್ದು ಈ ಘಟನೆ ನಡೆಯಲು ಕಾರಣವೇನೆಂದು ಸ್ಪಷ್ಟವಾಗಿಲ್ಲ. ಕೊಲ್ಲಲ್ಪಟ್ಟಿರುವವರೊಂದಿಗೆ ಹರೀಶ್ ಕುಮಾರ್ ಈ ಮೊದಲು ಜಗಳ ಮಾಡಿದ್ದ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ದುರ್ಘಟನೆ ತಿಳಿದಾಗ ಸ್ಥಳಕ್ಕೆ ಬಂದಿದ್ದ ಪತ್ನಿ ಪ್ರಿಯಾಂಕಳ ಮೇಲೆಯೂ ಹರೀಶ್ ಕುಮಾರ್ ಗುಂಡು ಹಾರಿಸಿದನಲ್ಲದೆ ತನ್ನ ಮೇಲೆಯೂ ಗುಂಡು ಹಾರಿಸಿದ್ದಾನೆ. ಇವರಿಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಿಯಾಂಕ ಎಂಟು ತಿಂಗಳ ಗರ್ಭಿಣಿಯಾಗಿದ್ದಾಳೆ. ಹರೀಶ್ ವಿರುದ್ಧ ಐಪಿಸಿ ಸೆಕ್ಷನ್302,307, ಪ್ರಕಾರ ಹಾಗೂ ಶಸಸ್ತ್ರ ಕಾಯ್ದೆ 27(3) ಪ್ರಕಾರ ಕೇಸು ದಾಖಲಿಸಲಾಗಿದೆ. ಕೆಲಸದ ಸ್ಥಳದ ಕಿರುಕುಳವೇ ಹರೀಶ್‌ನನ್ನು ಈ ಕೃತ್ಯಕ್ಕೆ ಪ್ರೇರೇಪಿಸಿರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.