ಪ್ರಧಾನಿ ಎಂದರೆ ದೇಶ ಅಲ್ಲ, ದೇಶ ಎಂದರೆ ಪ್ರಧಾನಿ ಅಲ್ಲ
ಹೊಸದಿಲ್ಲಿ , ಮಾ. 3 : ಕಪ್ಪು ಹಣ, ಹಣದುಬ್ಬರ , ರೋಹಿತ್ ವೇಮುಲ ಹಾಗು ಜೆ ಎನ್ ಯು ಪ್ರಕರಣಗಳನ್ನು ಕೇಂದ್ರ ಸರಕಾರ ನಿಭಾಯಿಸಿದ ರೀತಿಯನ್ನು ಖಂಡಿಸಿ ಸಂಸತ್ತಿನ ಅಧಿವೇಶನದಲ್ಲಿ ಬುಧವಾರ ರಾಹುಲ್ ಗಾಂಧೀ ಭರ್ಜರಿ ಭಾಷಣ ಮಾಡಿದ್ದಾರೆ. ವಿಶೇಷವೆಂದರೆ, ರಾಹುಲ್ ಬಗ್ಗೆ ಸಾಮಾನ್ಯವಾಗಿ ಮೂಗು ಮುರಿಯುವ ಸಾಮಾಜಿಕ ಜಾಲತಾಣ ದಲ್ಲಿಯೂ ಅವರ ಭಾಷಣಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಹುಲ್ ಅವರ ಬುಧವಾರದ ವಾಗ್ಬಾನಗಳ ಕೆಲವು ಸ್ಯಾಂಪಲ್ ಗಳು ಇಲ್ಲಿವೆ :
# ನಾನು ಆರೆಸ್ಸೆಸ್ ಅಲ್ಲ. ನಾನು ನನ್ನ ತಪ್ಪುಗಳಿಂದ ಪಾಠ ಕಲಿಯುವವನು.
# ಮೋದಿಜಿ, ಕಪ್ಪು ಹಣ ಇರುವವರನ್ನು ಜೈಲಿಗೆ ಅಟ್ಟುತ್ತೇನೆ ಎಂದು ಹೇಳುತ್ತಿದ್ದರು. ಈಗ ಅವರು ಈ ಕಪ್ಪು ಹಣದವರನ್ನು ಬಚಾವ್ ಮಾಡುವ ಯೋಜನೆ ತಂದಿದ್ದಾರೆ. ಅವರ ಕಪ್ಪು ಹಣ ನಿಯಂತ್ರಿಸುವ ಯೋಜನೆ ಕೇವಲ ಫೇರ್ ಎಂಡ್ ಲವ್ಲಿ ಸ್ಕೀಮ್ ಆಗಿದೆ.
# ಚುನಾವಣೆಗೆ ಮುನ್ನ ಬೇಳೆಗೆ 70 ರೂ. ಇದೆ , ಅದನ್ನು ಕಡಿಮೆ ಮಾಡಬೇಕು ಎನ್ನುತ್ತಿದ್ದರು. ಈಗ ಬೇಳೆಗೆ 200 ರೂ . ಆಗಿದೆ.
# ನರೇಗಾ ಯೋಜನೆಯಷ್ಟು ಉತ್ತಮ ಯೋಜನೆ ಬೇರೆ ಇಲ್ಲ ಎಂದು ಅರುಣ್ ಜೇಟ್ಲಿ ಅವರು ನನ್ನ ಹತ್ತಿರ ಹೇಳುತ್ತಾರೆ. ಅದನ್ನು ನಿಮ್ಮ ಬಾಸ್ ಗೆ ಏಕೆ ಹೇಳುವುದಿಲ್ಲ ಎಂದು ಅವರಿಗೆ ನಾನು ಕೇಳಿದೆ.
# ಮೋದಿಯವರ ಮೆಕ್ ಇನ್ ಇಂಡಿಯಾಗೆ ಸಿಂಹದ ಲೋಗೋ ಇದೆ. ಉದ್ಯೋಗ ಎಷ್ಟು ಸೃಷ್ಟಿಯಾಗಿದೆ ಎಂದು ಕೇಳಿದರೆ ಆ ಸಿಂಹವನ್ನು ತೋರಿಸುತ್ತಾರೆ.
# ಮೋದಿಯವರು ರೋಹಿತ್ ವೆಮುಲನ ತಾಯಿಗೆ ಈವರೆಗೆ ಸಾಂತ್ವನ ಹೇಳಿಲ್ಲ.
# ಶಿಕ್ಷಕರು ಹಾಗು ಪತ್ರಕರ್ತರ ಮೇಲೆ ಹಲ್ಲೆ ನಡೆದಾಗ ಪ್ರಧಾನಿ ಯಾಕೆ ಒಂದೇ ಒಂದು ಶಬ್ದ ಹೇಳಲಿಲ್ಲ ?
# ನಾನು ಕನ್ಹಯ್ಯ ಅವರ ಪೂರ್ಣ ಭಾಷಣ ಕೇಳಿದ್ದೇನೆ. ಅದರಲ್ಲಿ ಒಂದೇ ಒಂದು ದೇಶ ವಿರೋಧಿ ಪದ ಬಳಸಿಲ್ಲ .
# ಶಿಕ್ಷಕರಿಗೆ ಹಲ್ಲೆ ಮಾಡಲು ಜಗತ್ತಿನ ಯಾವೆ ಧರ್ಮ ಹೇಳಿಕೊಡುತ್ತದೆ ?
# ನಿಮ್ಮ ಆರೆಸ್ಸೆಸ್ ಶಿಕ್ಷಕರು ನಿಮಗೆ ಹೇಳಿ ಕೊತ್ತಿದ್ದಿಷ್ಟೇ. ಜಗತ್ತಿನಲ್ಲಿರುವುದು ನಿಮ್ಮದೊಂದೇ ಸತ್ಯ. ಬೇರೆಯವರ ಅಭಿಪ್ರಾಯಕ್ಕೆ ಕವಡೆ ಕಿಮ್ಮತ್ತಿಲ್ಲ ಎಂದು .
# 26/11 ರ ದಾಳಿ ವಿರುದ್ಧ ಕಾರ್ಯಾಚರಣೆ ನಡೆದು ಸೈನಿಕರು , ನಾಗರೀಕರು ಸಾಯುತ್ತಿದ್ದಾಗ ಮುಂಬೈ ಗೆ ಹೋಗಬೇಡಿ ಎಂದು ಭಾರತ ಸರಕಾರ ಮೊದಿಜಿ ಅವರಲ್ಲಿ ಬೇಡಿಕೊಂಡಿತು. ಆದರೆ ಅದಕ್ಕೆ ಬೆಲೆ ಕೊಡದೆ ಅಲ್ಲಿಗೆ ಹೋಗಿ , ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದರು ಅವರು.
# ಪ್ರಧಾನಿ ಅಂದರೆ ದೇಶ ಅಲ್ಲ, ದೇಶ ಅಂದರ ಪ್ರಧಾನಿ ಅಲ್ಲ
# ಇಡೀ ದೇಶ ಪ್ರಧಾನಿ ಅವರಿಗೆ ಸಂದೇಶ ನೀಡಲು ಕಾಯುತ್ತಿದೆ, ಆದರೆ ಅವರು ರಾಜನಾಥ್ ಜಿ ಹಾಗು ಸುಷ್ಮಾ ಜಿ ಅವರ ಮಾತನ್ನು ಮಾತ್ರ ಕೇಳುತ್ತಿದ್ದಾರೆ. ದೇಶದ ಮಾತು ಕೇಳಿ ಎಂದು ನಾನು ಅವರನ್ನು ವಿನಂತಿಸುತ್ತೇನೆ .
ರಾಹುಲ್ ಗಾಂಧೀ ಅವರು ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನೆ ಸಲ್ಲಿಸುತ್ತಿದ್ದಾರೆ ಅಥವಾ ತಮ್ಮ ಪಕ್ಷದ ಸಮಾವೇಶದಲ್ಲಿ ಮಾತನಾಡುತ್ತಿದ್ದರೆ ಎಂದು ಗೊತ್ತಾಗಲಿಲ್ಲ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಪ್ರತಿಕ್ರಿಯಿಸಿದರು.