ಪಿಎಫ್‌ಗೆ ಕರ; ನಿರ್ಧಾರ ಮರುಪರಿಶೀಲನೆಗೆ ಮೋದಿ ಸೂಚನೆ
Update: 2016-03-05 12:52 IST
ಹೊಸದಿಲ್ಲಿ: ಪ್ರಾವಿಡೆಂಟ್ ಫಂಡ್ ಹಿಂದೆಗೆತದ ಮೇಲಿನ ವಿವಾದಿತ ತೆರಿಗೆಯನ್ನು ಕೇಂದ್ರ ಸರಕಾರ ಹಿಂದೆಗೆಯುವ ಸಾಧ್ಯತೆಯಿದೆ.
ಪಿಎಫ್ ಮೇಲಿನ ತೆರಿಗೆಯ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿತ್ತಸಚಿವ ಅರುಣ್‌ಜೇಟ್ಲಿಗೆ ಸೂಚಿಸಿದ್ದಾರೆ.
ಪಿಎಫ್ ಮೊತ್ತದ ಶೇ. 60ರಷ್ಟರ ಮೊತ್ತಕ್ಕೆ ಬಡ್ಡಿ ಸೇರಿಸಲು ಬಜೆಟ್‌ನಲ್ಲಿ ನಿರ್ದೇಶಿಸಲಾಗಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಎಪ್ರಿಲ್ ಒಂದರನಂತರದ ನಿಕ್ಷೇಪ ಹಿಂದೆಗೆಯುವಾಗ ತೆರಿಗೆ ಅನ್ವಯವಾಗಲಿದ್ದು, ಪ್ರಸ್ತುತ ಇಪಿಎಫ್‌ನಿಂದ ಹಿಂದೆಗೆಯುವ ಮೊತ್ತಕ್ಕೆ ತೆರಿಗೆಯಿಲ್ಲ.
ಈ ವರ್ಷ ಒಂದರ ಬಳಿಕ ನಿಕ್ಷೇಪಿಸುವ ಮೊತ್ತ ಅನಂತರ ಹಿಂದೆಗೆಯುವಾಗ ಅದರ ಶೇ. 60ರಷ್ಟು ಬಡ್ಡಿಗೆ ಮಾತ್ರ ತೆರಿಗೆ ಅನ್ವಯವಾಗುತ್ತದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಆದಿಯ ಹೇಳಿದ್ದರು. ಪ್ರತಿತಿಂಗಳು 15,000 ರೂ.ವರೆಗೆ ಮಾತ್ರ ವೇತನ ಪಡೆಯುವವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.