ಮೂರು ರಾಜ್ಯಗಳ ರಾಜ್ಯಸಭಾ ಸ್ಥಾನಗಳಿಗೆ ಲಾಬಿ ಪ್ರಾರಂಭ: ಮಾರ್ಚ್ 21ಕ್ಕೆ ಚುನಾವಣೆ
ಅಗರ್ತಲಾ/ಕೊಹಿಮಾ/ಗುವಾಹಟಿ, ಮಾರ್ಚ್.5: ರಾಜ್ಯಸಭಾ ಸದಸ್ಯ ಸ್ಥಾನಕ್ಕಾಗಿ ಮಾರ್ಚ್ 21ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಪೂರ್ವೋತ್ತರದ ಮೂರು ರಾಜ್ಯಗಳಾದ ಅಸ್ಸಾಮ್,ತ್ರಿಪುರ, ನಾಗಲೆಂಡ್‌ನ ಸೀಟ್‌ಗಳನ್ನು ಗಳಿಸಲಿಕ್ಕಾಗಿ ಲಾಬಿ ಅರಂಭವಾಗಿದೆ. ಈ ರಾಜ್ಯಗಳ ನಾಲ್ಕು ಸ್ಥಾನಗಳುಖಾಲಿಯಿವೆ. ಬೇರೆಬೇರೆ ರಾಜಕೀಯ ಪಕ್ಷಗಳ ಸರಕಾರ ಇಲ್ಲಿವೆ. ರಾಜ್ಯಸಭೆಯ ಒಟ್ಟು ಹದಿಮೂರು ಸ್ಥಾನಗಳಿಗೆ ಆರುರಾಜ್ಯಗಳಾದ ಪಂಜಾಬ್,ಹಿಮಾಚಲ ಪ್ರದೇಶ, ಕೇರಳ, ನಾಗಲ್ಯಾಂಡ್ ಮತ್ತುತ್ರಿಪುರಗಳಲ್ಲಿಮಾರ್ಚ್ 21ಕ್ಕೆ ಚುನಾವಣೆ ನಡೆಯಲಿದೆ. ಅಧಿಕಾರಿಗಳು ಹೇಳಿರುವ ಪ್ರಕಾರ ಚುನಾವಣೆ ಆಯೋಗ ಮತ್ತು ರಾಷ್ಟ್ರಪತಿಗಳಿಂದ ಚುನಾವಣೆಯ ಪ್ರತ್ಯಪ್ರತ್ಯೇಕ ಸೂಚನೆ ಹೊರಡಿಸಲಾಗಿದೆ.
ತ್ರಿಪುರದಲ್ಲಿ ಕೇವಲ ಒಂದು ಸ್ಥಾನ ಖಾಲಿಯಾಗುತ್ತಿದ್ದು ಅದರಲ್ಲಿ ಮಾರ್ಕ್ಸ್‌ವಾದಿ ಕಮ್ಮೂನಿಸ್ಟ್ ಝಾರನ್ ದಾಸ್ ಸದಸ್ಯರಾಗಿದ್ದಾರೆ. ಅವರ ಸಮಯಾವಧಿ ಈ ಬರುವ ಎಪ್ರಿಲ್‌ಗೆಕೊನೆಗೊಳ್ಳಲಿದ್ದು ಆ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ರವಿವಾರ ಕಮ್ಯೂನಿಸ್ಟ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು ಅದರ ವತಿಯಿಂದ ಯಾರು ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆಂದು ನಿರ್ಧಾರವಾಗಲಿದೆ. ಆದರೆ ದಾಸ್ ಮರು ಸ್ಪರ್ಧೆಯ ಬಯಕೆ ವ್ಯಕ್ತಪಡಿಸಿದ್ದಾರೆ.
ಅಸ್ಸಾಮ್‌ನಲ್ಲಿರಾಜ್ಯ ಸಭೆಯ ಎರಡು ಸ್ಥಾನ ಖಾಲಿಯಾಗುತ್ತಿದ್ದು ಕಾಂಗ್ರೆಸ್‌ನ ಪಂಕಜ್ ಬೊರ ಮತ್ತು ನಾಝ್ನೀನ್ ಫಾರೂಕ್ ಹಾಲಿ ಸದಸ್ಯರಾಗಿದ್ದಾರೆ.ಅವರು ಮರು ಸ್ಪರ್ಧೆಯ ಇಚ್ಛೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸಿನೊಳಗೆ ಅವರನ್ನು ಬದಲಾಯಿಸಬೇಕೆಂಬ ಕೂಗು ಕೇಳಿಸುತ್ತಿದೆ. ಓರ್ವ ಉನ್ನತ ಕಾಂಗ್ರೆಸ್ ನಾಯಕರು ಹೇಳಿರುವ ಪ್ರಕಾರ ಮಾಜಿ ಕೇಂದ್ರ ಸಚಿವ ಪವನ್ ಸಿಂಗ್ ಘಾಟೋವರ್, ಕಾಂಗ್ರೆಸ್ ಪ್ರದೇಶ ಅಧ್ಯಕ್ಷ ಅಂಜನ್ ದತ್ತ, ರಾನಿ ನಾರಾಹ್, ದ್ವಿಜೆನ್ ಸಮಾರಾಹ್, ಕೃಪಾ ಚಾಲಿಹಾ, ವಿಷ್ಣು ಪ್ರಸಾದ್ ಮತ್ತು ಅಬ್ದುಲ್ ಮಜುಂದಾರ್ ಕೂಡ ಈ ರಾಜ್ಯಸಭಾ ಸದಸ್ಯ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇವರಲ್ಲದೆ ಓರ್ವ ಮಾಧ್ಯಮ ದಿಗ್ಗಜರೂ ರಾಜ್ಯಸಭಾ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಅಖಿಲ ಭಾರತ ಲೋಕತಾಂತ್ರಿಕ್ ಮೋರ್ಚಾದ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್‌ರ ಸಂಪರ್ಕದಲ್ಲಿದ್ದಾರೆ. ನಾಗಲ್ಯಾಂಡ್ನಲ್ಲಿ ಏಕೈಕ ರಾಜ್ಯಸಭಾ ಸ್ಥಾನವಿದ್ದು ನಾಗಾ ಪೀಪಲ್ಸ್ ಫ್ರಂಟ್‌ನ ಕೆ.ಜಿ.ಕೆನ್ಯೆಯರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಆದರೆ ನಾಗಾ ಪೀಪಲ್ಸ್ ಫ್ರಂಟ್‌ನ ಮಿತ್ರರ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಾಕಲು ಇಚ್ಛಿಸಿದೆ. ಬಿಜೆಪಿಯ ರಾಜ್ಯ ಪಧಾನ ಕಾರ್ಯದರ್ಶಿ ಎಡ್ಜು ಎಲುವೊ ಅವರ ಪಕ್ಷದ ಮಾಜಿ ಪ್ರದೇಶಾಧ್ಯಕ್ಷ ಎಮ್, ಚುಬಾ ಎವೊ, ಐಎಮ್‌ಎಸ್‌ನ ಎಚ್.ಜೆ. ಖುಲು ಮತ್ತು ಮಾಜಿ ಸಚಿವ ಟಿ.ಎ. ನಗುಲ್ಲಿಯವರಲ್ಲಿ ಯಾರನ್ನಾದರೊಬ್ಬರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.