×
Ad

ಹರಿಯಾಣದಲ್ಲಿ ಕುಸ್ತಿಗೆ ಒಂದು ಕೋಟಿ ರೂ. ಬಹುಮಾನ!

Update: 2016-03-05 13:57 IST

ಚಂಡೀಗಡ, ಮಾರ್ಚ್.5: ಹರಿಯಾಣ ಸರಕಾರ ಕುಸ್ತಿ ಸ್ಪರ್ಧೆಗೆ ಒಂದು ಕೋಟಿ ರೂ. ಬಹುಮಾನಘೋಷಿಸಿ ಅಚ್ಚರಿ ಸೃಷ್ಟಿಸಿದೆ. ಹರಿಯಾಣ ಸರಕಾರದ ಕ್ರೀಡಾ ಸಚಿವ ಅನಿಲ್ ವಿಜ್"ಶಹೀದ್ ಭಗತ್ ಸಿಂಗ್, ಸುಖ್‌ದೇವ್, ರಾಜಗುರು ಸ್ಮರಣೆಯಲ್ಲಿ ರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆ ಭಾರತ ಕೇಸರಿ ದಂಗಲ್‌ನ ಬಹುಮಾನದ ಮೊತ್ತ ಒಂದು ಕೋಟಿರೂ. ಇರಲಿದೆ. ರನ್ನರ್ ಅಪ್‌ಗೆ ಐವತ್ತು ಲಕ್ಷ ಮತ್ತು ಮೂರನೆ ಸ್ಥಾನಿಗೆ ಇಪ್ಪತ್ತೈದು ಲಕ್ಷ ಬಹುಮಾನ ನೀಡಲಾಗುವುದೆಂದು ತಿಳಿಸಿದ್ದಾರೆ.

ಕುಸ್ತಿ ಸ್ಪರ್ಧೆಯನ್ನು ಗುಡ್‌ಗಾಂವ್‌ನಲ್ಲಿ ದೇವಿಲಾಲ್ ಸ್ಟೇಡಿಯಂನಲ್ಲಿ ಮಾರ್ಚ್ 21ರಿಂದ 23ರವರೆಗೆ ಆಯೋಜಿಸಲಾಗುವುದು. "ಹರಿಯಾಣದಲ್ಲಿ ಈ ರೀತಿಯ ರಾಷ್ಟ್ರೀಯ ಸ್ಪರ್ಧೆ ಮೊದಲ ಬಾರಿ ನಡೆಯುತ್ತಿದೆ.ಇದು ವಾರ್ಷಿಕ ಸ್ಪರ್ಧೆಯಾಗಿದೆ" ಎಂದು ಸಚಿವ ವಿಜ್ ಹೇಳಿದ್ದಾರೆ. ಸ್ಪರ್ಧೆಯ ಫೈನಲ್ ಮಾರ್ಚ್ 23ರಂದು ಶಹೀದ್ ಭಗತ್ ಸಿಂಗ್ ಹುತಾತ್ಮರಾದ ದಿನದಂದು ನಡೆಯಲಿದೆ. ಪ್ರಥಮ ಸ್ಥಾನ ಗೆದ್ದ ಕುಸ್ತಿ ಪಟುವಿಗೆ ಒಂದು ಕೋಟಿ ರೂ. ನಗದು ನೀಡಲಾಗುವುದು. ಎರಡನೆ ಸ್ಥಾನಿಗೆ ಐವತ್ತು ಲಕ್ಷ ರೂ. ನಗದು ಮತ್ತು ಮೂರನೇ ಸ್ಥಾನಿಗೆ ಇಪ್ಪತ್ತೈದು ಲಕ್ಷ ರೂ. ನಗದು ನೀಡಲಾಗುವುದು ಎಂದು ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುವಿಗೆ ಕನಿಷ್ಠ ಜನವರಿ 2016ರಲ್ಲಿ ಹದಿನೇಳು ವರ್ಷ ತುಂಬಿರಬೇಕಾಗಿದೆ. ಎಂಬತ್ತು ಕೆಜಿ ಭಾರ ಇರಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ ಮೂರು ವರ್ಷಗಳಿಂದ ಫ್ರೀಸ್ಟೈ ಮತ್ತು ಗ್ರೀಕೋ ರೋಮನ್ ಶ್ರೇಣಿಯಲ್ಲಿ ಸ್ಪರ್ಧಿಸಿ ಪದಕ ಗೆದ್ದವರು ಮಾತ್ರ ಈ ಕುಸ್ತಿ ಕೂಟದಲ್ಲಿ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಭಾರತೀಯ ಕುಸ್ತಿಫೆಡರೇಷನ್‌ನಿಂದ ಮಾನ್ಯತೆ ಹೊಂದಿರಬೇಕು. ಹರಿಯಾಣ ಕೇಸರಿ ಹಿಂದ್ ಕೇಸರಿ ಹಾಗೂ ಎಲ್ಲ ರಾಜ್ಯಗಳ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ ಕುಸ್ತಿಪಟುಗಳು ರಾಷ್ಟ್ರೀಯ ಕ್ರೀಡೆ ಹಾಗೂ ಸೇನಾ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಆಟಗಾರರು, ಸರ್ವಿಸ್ ಕ್ರೀಡೆಯಲ್ಲಿ ಭಾಗವಹಿಸಿರುವವರು, ರೈಲ್ವೆ, ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಕುಸ್ತಿಪಟುಗಳು ಮತ್ತು ಪೊಲೀಸ್ ಪಡೆಯ ಕುಸ್ತಿ ಪಟುಗಳು ಕೂಡಾ ಈ ಕುಸ್ತಿ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ ಎಂದು ಸಚಿವ ವಿಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News