ಭಾರತದ ಗೆಳೆತನ ಅಫಘಾನಿಸ್ತಾನದ ಸ್ವರೂಪವನ್ನೆ ಬದಲಾಯಿಸಿತು: ಹಾಮಿದ್ ಕರ್ಜಾಯಿ
ಕಾನ್ಪುರ,ಮಾರ್ಚ್.5: ಅಫಘಾನಿಸ್ಥಾನದ ಮಾಜಿ ರಾಷ್ಟ್ರಪತಿ ಹಾಮಿದ್ ಕರ್ಜಾಯಿ ಶುಕ್ರವಾರ ಭಾರತದ ಗೆಳೆತನದಿಂದಾಗಿ ಅಫಘಾನಿಸ್ತಾನದ ಸ್ವರೂಪವೇ ಬದಲಾಗಿದೆ ಎಂದು ಹೇಳಿದ್ದಾರೆ. ಅಫಘಾನಿಸ್ತಾನದ ಪ್ರಗತಿಯಲ್ಲಿ ಭಾರತದ ದೊಡ್ಡ ಕೊಡುಗೆಯಿದೆ. ವಿಪರೀತ ಪರಿಸ್ಥಿತಿ ನೆಲೆಸಿದ್ದರೂ ಭಾರತ ಅಪಘಾನಿಸ್ತಾನಕ್ಕೆನೆರವಾಯಿತು. ಸಾವಿರಾರು ವಿದ್ಯಾರ್ಥಿಗಳು ಭಾರತಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಲ್ಲಿ ಸುಮಾರು ಅರುವತ್ತು ಸಾವಿರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾರತದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಎಂದು ಕಾನ್‌ಪುರದ ಐಐಟಿಯ ವಾರ್ಷಿಕ ಸಮಾರಂಭದಲ್ಲಿ ತಿಳಿಸಿದ್ದಾರೆ.
ಕರ್ಜಾಯಿ ಭಾರತ ಅಫಘಾನಿಸ್ತಾನದ ಗೆಳೆತನ ಸಿಮೆಂಟ್‌ನಂತೆ ಗಟ್ಟಿಮುಟ್ಟಾಗಿದೆ.ಭಾರತ ಅಫಘಾನಿಸ್ತಾನಕ್ಕೆ ಹಣಕಾಸು ರೂಪದಲ್ಲಿ ಬಹಳ ನೆರವು ನೀಡಿದೆ. ಅಫಘಾನಿಸ್ತಾನದಲ್ಲಿ ಶಾಲೆಗಳು, ಸಂಸ್ಥೆಗಳು, ಹಾಗೂ ಸಾರಿಗೆ ಸರಿಯಿರಲಿಲ್ಲ. ಆ ಸಮಯದಲ್ಲಿ ಭಾರತದಿಂದ ನೆರವು ಸಿಕ್ಕಿದೆ. ರಷ್ಯಾದ ಯುದ್ಧ ಸಮಯದಲ್ಲಿ ಭಾರತ ಅಪಘಾನಿಸ್ತಾನವನ್ನು ಬೆಂಬಲಿಸಿತ್ತು. ಆದ್ದರಿಂದ ಭಾರತವನ್ನು ಮರೆಯಲು ಸಾಧ್ಯವಿಲ್ಲ. ಸ್ವಾತಂತ್ರ್ಯದ ಬಳಿಕ ಭಾರತ ಶಿಕ್ಷಣ ಕ್ಷೇತ್ರಕ್ಕೆ ಒಂದು ಹೊಸ ಆಯಾಮವನ್ನು ನೀಡಿದೆ. ನಿರ್ಮಾಣ ಕಾರ್ಯದಲ್ಲಿ ಭಾರೀ ನೆರವಾಗಿದೆ ಎಂದು ಕರ್ಜಾಯಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಫಘಾನಿಸ್ತಾನಕ್ಕೆ ಬಂದು ಅವರ ಹಸ್ತದಿಂದಲೇ ಅಲ್ಲಿನ ಸಂಸತ್‌ನ ಶುಭಾರಂಭ ಮಾಡಿ ಅಫಘಾನಿ ಜನರ ಹೃದಯವನ್ನು ಗೆದ್ದಿದ್ದಾರೆ ಎಂದು ಕರ್ಜಾಯಿ ಈ ಸಂದರ್ಭದಲ್ಲಿ ಹೇಳಿದ್ದಾರೆ.