×
Ad

ಪೊಲೀಸರ ಮುಂದೆ ಪ್ರಿಯತಮನನ್ನು ತೊರೆಯಲಾರೆ, ಗಂಡನನ್ನೂ ತೊರೆಯಲಾರೆ ಎಂದ ಮಹಿಳೆ!

Update: 2016-03-05 15:35 IST

ಇಂದೋರ್,ಮಾರ್ಚ್.5: ಇಲ್ಲಿನ ಮಹಿಳಾ ಪೊಲೀಸ್ ಠಾಣೆಯೊಂದರಲ್ಲಿ ದೂರು ನೀಡಲು ಬಂದ ಮಹಿಳೆಯ ವಿರುದ್ಧ ಪ್ರಿಯತಮನೊಂದಿಗೆ ಸಂಬಂಧ ಇರಿಸಿಕೊಂಡಿದ್ದಾಳೆ ಪತಿಯೇ ಆರೋಪ ಹೊರಿಸಿದ್ದಾನೆ. ಮಹಿಳೆ ಈ ಆರೋಪವನ್ನು ಒಪ್ಪಿಕೊಂಡಿದ್ದು ತಾನು ಪತಿಯನ್ನೂ ತೊರೆಯಲಾರೆ ಪ್ರಿಯತಮನನ್ನೂ ಬಿಡಲಾರೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿರುವ ಪ್ರಕರಣ ವರದಿಯಾಗಿದೆ.

ಇಂದೋರ್ ಜಗನ್ನಾಥ್ ನಗರ ನಿವಾಸಿ ಮಹಿಳೆ ಠಾಣೆಯಲ್ಲಿ ಪತಿ ಶರಾಬು ಕುಡಿದು ಹಲ್ಲೆಯೆಸಗಿದ್ದಾನೆ ಎಂದು ದೂರು ನೀಡಿದ್ದಲ್ಲದೆ ಪತಿ ತನಗೆ ಖರ್ಚಿಗೆ ಹಣ ನೀಡುತ್ತಿಲ್ಲವೆಂದೂ ಹೇಳಿದ್ದಾಳೆ. ಪೊಲೀಸರು ಠಾಣೆಗೆ ಪತಿಯನ್ನು ಕರೆಯಿಸಿಕೊಂಡಿದ್ದರು. ಪತಿ ಪತ್ನಿಯ ಶೀಲವನ್ನೇ ಪ್ರಶ್ನಿಸಿ ಕಾಲನಿಯ ಒಬ್ಬ ಯುವಕನೊಂದಿಗೆ ಇವಳು ಸಂಬಂಧ ಇರಿಸಿಕೊಂಡಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದನು. ಈ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯ ಪ್ರಿಯತಮನನ್ನು ಠಾಣೆಗೆ ಕರೆಯಿಸಲಾಯಿತು. ಆಗ ಅವಳು ಎಲ್ಲರ ಮುಂದೆ ತನ್ನ ಈ ಅನೈತಿಕ ಸಂಬಂಧವನ್ನು ಒಪ್ಪಿಕೊಂಡು ಪತಿ ತನ್ನ ಬಗ್ಗೆ ಗಮನ ನೀಡುವುದಿಲ್ಲ ತನ್ನ ಜವಾಬ್ದಾರಿಯನ್ನು ಪ್ರಿಯತಮನೇ ವಹಿಸಿಕೊಂಡಿದ್ದಾನೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಮಹಿಳೆಯ ವಿವರಣೆಯನ್ನು ಕೇಳಿ ಅಲ್ಲಿದ್ದ ಪೊಲೀಸರು ದಂಗಾಗಿದ್ದರು. ಎಎಸ್ಸೈ ಬಬಿತಾ ವ್ಯಾಸ್ ಪ್ರೇಮಿಯೊಂದಿಗೆ ಸಂಬಂಧ ಮುರಿದು ಪತಿಯೊಂದಿಗಿರಲು ಉಪದೇಶಿಸಿದಾಗ ಮಹಿಳೆ ನಿರಾಕರಿಸಿ ತಾನು ಪ್ರೇಮಿಯನ್ನು ತೊರೆಯಲು ಸಾಧ್ಯವಿಲ್ಲ ಎಂದಿದ್ದಾಳೆ. ಎಷ್ಟೇ ಹೇಳಿದರೂ ಕೇಳದಾಗ ಎಎಸ್ಸೈ ಬಬಿತಾ ವ್ಯಾಸ್ ಪತಿಗೆ ವಿಚ್ಛೇದನ ಕೊಟ್ಟು ಪ್ರಿಯತಮನೊಂದಿಗೆ ಇರುವಂತೆ ಸೂಚಿಸಿದರು. ಆದರೆ ಇದನ್ನೂನಿರಾಕರಿಸಿ ಮಹಿಳೆ ಅವನು ತನ್ನತ್ತ ಗಮನ ಹರಿಸದಿದ್ದರು ಆತ ತನ್ನ ಪತಿಯಾಗಿದ್ದಾನೆ ಅದ್ದರಿಂದ ಅವನನ್ನೂ ತೊರೆಯಲಾರೆ ಎಂದು ಹೇಳಿದ್ದಾಳೆ. ಪೊಲೀಸರ ಮುಂದೆ ಪ್ರಕರಣ ಜಟಿಲವಾಗಿಯೇ ಉಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News