×
Ad

ಜೆಎನ್‌ಯುನಲ್ಲಿ ಜಿನ್ನಾ ಹುಟ್ಟಿದರೆ ದಫನ ಮಾಡುತ್ತೇವೆ: ಯೋಗಿ ಆದಿತ್ಯಾನಂದ

Update: 2016-03-05 16:55 IST

ಹೊಸದಿಲ್ಲಿ,ಮಾರ್ಚ್.5; ಜವಾಹರಲಾಲ್ ನೆಹರೂ ಯುನಿವರ್ಸಿಟಿಯ ವಿದ್ಯಾರ್ಥಿಸಂಘ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿರುದ್ಧ ಬಿಜೆಪಿ ಫಯರ್‌ಬ್ರಾಂಡ್ ರಾಜಕಾರಣಿ ಮಾತಿನ ದಾಳಿಯನ್ನು ಬಿರುಸುಗೊಳಿಸಿದ್ದಾರೆ. ಕನ್ಹಯ್ಯಾರಿಗೆ ಹಾಕಲಾಗುತ್ತಿರುವ ಬೆದರಿಕೆಗಳ ನಡುವೆಯೇ ಸಂಸದ ಯೋಗಿ ಆದಿತ್ಯಾನಂದ ಜೆಎನ್‌ಯು ವಿರುದ್ಧ ಪ್ರಹಾರಕ್ಕಿಳಿದಿದ್ದಾರೆ. ಜೆಎನ್‌ಯುನಲ್ಲಿ ಜಿನ್ನಾ ಹುಟ್ಟಲು ಬಿಡುವುದಿಲ್ಲ. ಯಾವನೆ ಜಿನ್ನಾ ಹುಟ್ಟಿದರೆ ಅವನನ್ನು ಕೇಂದ್ರ ಸರಕಾರ ಸಾಯಿಸಲಿದೆ. ಜೆಎನ್‌ಯುವನ್ನು ದೇಶದ್ರೋಹಿಗಳ ಅಡ್ಡೆ ಮಾಡಲು ಬಿಡುವುದಿಲ್ಲ. ಯಾರಾದರೂ ಹಾಗೆ ಮಾಡಿದರೆ ಸರಕಾರ ಅವರನ್ನು ನಿಗ್ರಹಿಸಲಿದೆ ಎಂದು ಯೋಗಿ ಉರಿಕಾರಿದ್ದಾರೆ.

ರಾಷ್ಟ್ರ ವಿರೋಧಿ ಘೋಷಣೆ ಕೂಗುವುದು ಸ್ವಾತಂತ್ರ್ಯ ಅಲ್ಲ ಎಂದು ಜೆಎನ್ ಯು ಪ್ರಕರಣದ ಕುರಿತು ಪ್ರತಿಕ್ರಿಯಿಸುತ್ತಾ ಅದು ಅಭಿವ್ಯಕ್ತಿಯೂ ಅಲ್ಲ ಎಂದಿದ್ದಾರೆ. ಜೆಎನ್‌ಯುನಲ್ಲಿ ಭಾರತ ತುಂಡುತುಂಡಾಗಲಿದೆ ಇನ್ಶಾ ಅಲ್ಲಾಹ್ ಇನ್ಶಾ ಅಲ್ಲಾಹ್ ನಾವು ಲಜ್ಜಿತರಾಗಿದ್ದೇವೆ. ನಿನ್ನ ಕರುಣೆಯಿಂದ ಬದುಕುಳಿದಿದ್ದೇವೆ ಇಂತಹಾ ವಿರೋಧಿ ಘೋಷಣೆ ಕೂಗಲಾಗಿತ್ತೆಂದು ಯೋಗಿ ಹೇಳಿದ್ದಾರೆ.

ಇದಕ್ಕಿಂತಮೊದಲು ಉತ್ತರ ಪ್ರದೇಶದ ಬಿಜೆಪಿ ನಾಯಕ ಕನ್ಹಯ್ಯಾ ನಾಲಗೆ ಕತ್ತರಿಸಲು ಐದು ಲಕ್ಷದ ಬಹುಮಾನ ಘೋಷಿಸಿದ್ದರು. ಆನಂತರ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿತ್ತು. ಅಲ್ಲಿಪೂರ್ವಾಂಚಲ್ ಸೇನೆಯ ವತಿಯಿಂದ ಅಂಟಿಸಲಾಗಿದ್ದ ಒಂದು ಪೋಸ್ಟರ್‌ನಲ್ಲಿ ಕನ್ಹಯ್ಯಾರಿಗೆ ಗುಂಡಿಟ್ಟರೆ ಹನ್ನೊಂದು ಲಕ್ಷ ರೂ.ಬಹುಮಾನವನ್ನು ಘೋಷಿಸಲಾಗಿತ್ತು. ಆದರೂ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ರ ಭದ್ರತೆಗೆ ಈವರೆಗೂ ಯಾವುದೇ ಮಾರ್ಗ ಸೂಚಿಯನ್ನು ಜಾರಿಗೊಳಿಸಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News