×
Ad

ಮಳೆಯಾಳಂ ಚಿತ್ರರಂಗ ಅಭಿಜಾತ ನಟ ಕಲಾಭವನ್ ಮಣಿ ವಿಧಿವಶ

Update: 2016-03-06 21:21 IST

ಕೊಚ್ಚಿ,ಮಾರ್ಚ್,6 ;ಮಳೆಯಾಳಂ ಚಿತ್ರರಂಗದ ನಟ ಕಲಾಭವನ್ ಮಣಿ ನಿಧನರಾದರು. ಕರುಳಿಗೆ ಸಂಬಂಧಿಸಿದ ರೋಗದ ಕಾರಣದಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಮೃತರಾದರು. ನಿಧನರಾಗುವ ವೇಳೆ ಅವರಿಗೆ 45 ವರ್ಷ ವಯಸ್ಸಾಗಿತ್ತು. ಎರಡು ದಿವಸಗಳ ಹಿಂದೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

    ಕೊಚ್ಚಿ ಅಮೃತ ಆಸ್ಪತ್ರೆಯಲ್ಲಿ ಇಂದು ರಾತ್ರಿ( ರವಿವಾ) 7:15 ಕ್ಕೆ ನಿಧನರಾದರೆಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೆಲವೆ ಗಂಟೆಗಳ ಮೊದಲು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ತೃಶೂರ್ ಜಿಲ್ಲೆಯ ಪಾಲಕ್ಕಾಡ್‌ನಲ್ಲಿ ಜನಿಸಿದ್ದ ಮಣಿ ಮಲೆಯಾಳಂ ಅಲ್ಲದೆ ತಮಿಳ್, ತೆಲುಗು ಮೊದಲಾದ ಇತರ ದಕ್ಷಿಣಭಾರತದ ಸಿನೆಮಾಗಳಲ್ಲಿ ಅಭಿನಯಿಸಿದ್ದರು. ಕೊಚ್ಚಿಯಲ್ಲಿ ಕಲಾಭವನ್ ಮಿಮಿಕ್ಸ್ ಪರೇಡ್ ಮೂಲಕ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಹಾಸ್ಯನಟನಾಗಿ ಸಿನೆಮಾರಂಗವನ್ನು ಪ್ರವೇಶಿಸಿದ್ದರು. ನಂತರ ನಾಯಕನಾಗಿ ಬೆಳೆದಿದ್ದರು. ಜಾನಪದ ಹಾಡುಗಳನ್ನು ಹಾಡುವ ಮೂಲಕ ಗಾಯನ ಕ್ಷೇತ್ರದಲ್ಲಿಯೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದರು. ಕೇರಳ ರಾಜ್ಯದ ಹೊರಗೂ ಹಾಡಿದ್ದರಲ್ಲದೆ ಹೊಸ ತಲೆಮಾರಿನ ಸಿನೆಮಾ ಸಂಗೀತಕ್ಕೆ ಸಮಾನಾಂತರವಾಗಿ ಶ್ರೀ ಅರ್ಮುಗಂ ಬರೆದ ಜಾನಪದ ಹಾಡುಗಳನ್ನೂ ಮಣಿ ಜಾನಪದ ಶೈಲಿಯಲ್ಲಿ ಹಾಡುವ ಮೂಲಕ ಜನರ ಮನರಂಜಿಸಿದ್ದರು. ತೃಶೂರ್ ಜಿಲ್ಲೆಯ ಚಾಲಕ್ಕುಡಿಯಲ್ಲಿ ಕಲಾಭವನ್ ಮಣಿ ಜನಿಸಿದ್ದರು. ಆಟೊ ಚಾಲಕನಾಗಿ ದುಡಿದ ಬಳಿಕ ಅವರು ಸಿನೆಮಾ ರಂಕ್ಕೆ ಕಾಲಿಟ್ಟಿದ್ದರು.

ಅಕ್ಷರಂ ಎಂಬ ಚಲನ ಚಿತ್ರದಲ್ಲಿ ಒಬ್ಬ ಆಟೊ ಚಾಲಕನ ಪಾತ್ರದಲ್ಲಿ ನಟಿಸಿದರೂ ಸುಂದರ್ ದಾಸ್ ಲೋಹಿತಾದಾಸ್‌ರ ಸಲ್ಲಾಪಂ ಎಂಬ ಚಲನಚಿತ್ರದಲ್ಲಿ ರಾಜಪ್ಪನ್ ಪಾತ್ರದ ಮೂಲಕ ಮಲೆಯಾಳಂ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದರು.

  ಆರಂಭದಲ್ಲಿ ಸಹನಟನಾಗಿ ಗಮನಸೆಳೆದ ಅವರು ನಂತರ ನಾಯಕನ ಪಾತ್ರಕ್ಕೆ ಭಡ್ತಿಹೊಂದಿದ್ದರು. ವಾಸಂತಿಯೂಂ ಲಕ್ಷ್ಮಿಯೂಂ ಪಿನ್ನ್ತೆ ಞಾನೂಂ, ಕರುಮಾಡಿ ಕುಟ್ಟನ್ ಎಂಬ ಚಿತ್ರಗಳು ಅವರಿಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದವು. ಹಾಗೂ ಈ ಚಿತ್ರಗಳು ಮಣಿಗೆ ಪ್ರಶಸ್ತಿಯನ್ನು ತಂದು ಕೊಟ್ಟಿತ್ತು. 2009ರ ನೆಹರೂ ಟ್ರೋಫಿ ದೋಣಿ ಸ್ಪರ್ಧೆಯಲ್ಲಿ ಜಯಶಾಲಿಯಾಗಿದ್ದರು. ಹಲವಾರು ಸಮಾಜ ಸೇವೆಗಳ ಮೂಲಕವೂ ಜನಾನುರಾಗಿಯಾಗಿದ್ದರು. ಪತ್ನಿ ನಿಮ್ಮಿ ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News