ಡೇವಿಸ್ ಕಪ್: ಇಟಲಿ,ಫ್ರಾನ್ಸ್, ಅಮೆರಿಕ ಕ್ವಾರ್ಟರ್ ಫೈನಲ್‌ಗೆ, ಸರ್ಬಿಯ ಔಟ್

Update: 2016-03-06 18:44 GMT

ಬೆಲ್‌ಗ್ರೇಡ್(ಸರ್ಬಿಯ), ಮಾ.6: ನೊವಾಕ್ ಜೊಕೊವಿಕ್ ನೇತೃತ್ವದ ಸರ್ಬಿಯ ತಂಡ ಡೇವಿಸ್ ಕಪ್ನ ಮೊದಲ ಸುತ್ತಿನಲ್ಲಿ ಕಝಕ್‌ಸ್ತಾನದ ವಿರುದ್ಧ ಶರಣಾಗಿ ಆಘಾತ ಅನುಭವಿಸಿದೆ.

ಇದೇ ವೇಳೆ, ಇಟಲಿ, ಫ್ರಾನ್ಸ್ ಹಾಗೂ ಅಮೆರಿಕ ತಂಡಗಳು ಕ್ರಮವಾಗಿ ಸ್ವಿಟ್ಝರ್ಲೆಂಡ್, ಕೆನಡಾ ಹಾಗೂ ಆಸ್ಟ್ರೇಲಿಯ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿವೆ.

ಸರ್ಬಿಯ ತಂಡವನ್ನು ಪ್ರತಿನಿಧಿಸಿದ ಜೊಕೊವಿಕ್ ಹಾಗೂ ನೆನಾಡ್ ಝಿಮೊನಿಕ್ ಕಝಕ್‌ಸ್ತಾನದ ಆ್ಯಂಡ್ರಿ ಗೊಲುಬೆವ್ ಹಾಗೂ ಅಲೆಕ್ಸಾಂಡರ್ ನೆಡೊವ್‌ಸೊವ್ ವಿರುದ್ಧ 6-3, 7-6(3), 7-5 ಸೆಟ್‌ಗಳಿಂದ ಶರಣಾದರು.

ಗೊಲುಬೆವ್ ಹಾಗೂ ನೆಡೊವ್‌ಸೆವ್ ಎರಡನೆ ಬಾರಿ ಪ್ರಮುಖ ಜೋಡಿಯನ್ನು ಸೋಲಿಸಿದ್ದಾರೆ. 2014ರಲ್ಲಿ ರೋಜರ್ ಫೆಡರರ್ ಹಾಗು ಸ್ಟಾನ್ ವಾವ್ರಿಂಕ ಜೋಡಿಯನ್ನು ಮಣಿಸಿದ್ದರು.

  ಕಳೆದ ವಾರ ದುಬೈ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದ ಇಟಲಿಯ ಸೈಮನ್ ಬೊಲೆಲ್ಲಿ ಹಾಗೂ ಆ್ಯಂಡ್ರಿಯಸ್ ಸೆಪ್ಪಿ ಸ್ವಿಟ್ಜರ್ಲೆಂಡ್‌ನ ಮಾರ್ಕೊ ಹಾಗೂ ಹೆನ್ರಿ ಅವರನ್ನು 6-3, 6-1, 6-3 ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ಇಟಲಿ ತಂಡ ಕಳೆದ ನಾಲ್ಕು ವರ್ಷಗಳಲ್ಲಿ ಮೂರನೆ ಬಾರಿ ಕ್ವಾರ್ಟರ್ ಫೈನಲ್ ತಲುಪಲು ನೆರವಾಗಿದ್ದಾರೆ.

ಫ್ರಾನ್ಸ್‌ನ ಜೊ-ವಿಲ್ಪ್ರೆಡ್ ಸೋಂಗ ಹಾಗೂ ರಿಚರ್ಡ್ ಗಾಸ್ಕಟ್ ಕೆನಡಾದ ವಾಸೆಕ್ ಪಾಸ್ಪಿಸಿಲ್ ಹಾಗೂ ಫಿಲಿಪ್ ಬೆಸ್ಟರ್‌ರನ್ನು 7-6(4), 6-1, 7-6(4) ಸೆಟ್‌ಗಳಿಂದ ಮಣಿಸಿದರು. ಮಿಲೊಸ್ ರಾವೊನಿಕ್ ಹಾಗು ಡೇನಿಯಲ್ ನೆಸ್ಟರ್ ಅನುಪಸ್ಥಿತಿಯಲ್ಲಿ ಕೆನಡಾ ಹಿನ್ನಡೆ ಅನುಭವಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News