×
Ad

ರಿಂಕು ಸಿಂಗ್ ಗೆ ಎರಡನೇ ಬ್ಯಾಟ್ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ

Update: 2024-04-25 22:15 IST

ವಿರಾಟ್ ಕೊಹ್ಲಿ  , ರಿಂಕು ಸಿಂಗ್ | PC : X

ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಕೋಲ್ಕತ ನೈಟ್ ರೈಡರ್ಸ್ ಬ್ಯಾಟರ್ ರಿಂಕು ಸಿಂಗ್ ಗೆ ಇನ್ನೊಂದು ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರೊಂದಿಗೆ ರಿಂಕು ಸಿಂಗ್ಗೆ ವಿರಾಟ್ ಎರಡು ಬ್ಯಾಟ್ ಗಳನ್ನು ನೀಡಿದಂತಾಗಿದೆ.

ತನಗೆ ಇನ್ನೊಂದು ಬ್ಯಾಟ್ ನೀಡುವಂತೆ ವಿರಾಟ್‌ ಗೆ ರಿಂಕು ಮನವಿ ಮಾಡುತ್ತಿರುವ ವೀಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಹಾಲಿ ಋತುವಿನ ಆರಂಭದಲ್ಲಿ ನೀವು ನನಗೆ ನೀಡಿರುವ ಬ್ಯಾಟ್ ಮುರಿದಿದೆ ಎಂದು ರಿಂಕು ಹೇಳಿದಾಗ ವಿರಾಟ್‌ ಗೆ ಬೇಸರವಾಗಿತ್ತು.

ಇತ್ತೀಚೆಗೆ ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಒಂದು ರನ್ನಿಂದ ಸೋಲಿಸಿದ ಬಳಿಕ, ಇನ್ನೊಂದು ಬ್ಯಾಟ್ ಕೊಡುವಂತೆ ರಿಂಕು, ವಿರಾಟ್ ರನ್ನು ಕೋರಿದ್ದರು.

ರಿಂಕು ಈಗ ವಿರಾಟ್ ರಿಂದ ಇನ್ನೊಂದು ಬ್ಯಾಟ್ ಪಡೆದಿರುವಂತೆ ಕಾಣಿಸುತ್ತಿದೆ.

ರಿಂಕು ಸಿಂಗ್ ಅಭಿಮಾನಿಯೋರ್ವನಿಗೆ ಬ್ಯಾಟನ್ನು ತೋರಿಸುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ‘ರಿಂಕು ಭಾಯ್, ಬ್ಯಾಟ್ ಸಿಕ್ಕಿತಾ?’’ ಎಂದು ಒಬ್ಬ ಅಭಿಮಾನಿ ರಿಂಕುರನ್ನು ಕೇಳುತ್ತಾನೆ. ಅದಕ್ಕೆ ‘ಸಿಕ್ಕಿತು’ ಎಂದು ರಿಂಕು ಉತ್ತರಿಸುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News