×
Ad

ಮಣಿಗೆ ವಿಷಪ್ರಾಶನವಾಗಿತ್ತೆ?: ಕಲಾಭವನ್ ಸಾವಿನ ಹಿಂದೆ ಸಂದೇಹಗಳ ಹುತ್ತ

Update: 2016-03-07 11:32 IST

   ಕೊಚ್ಚಿ; ನಿನ್ನೆ ಮೃತರಾದ ಕಲಾಭವನ್ ಮಣಿಯ ಮೃತದೇಹವನ್ನು ಸಾವಿನಕಾರಣವನ್ನು ತಿಳಿಯಲಿಕ್ಕಾಗಿ ಪೋಸ್ಟ್ ಮಾರ್ಟಂ ನಡೆಸಲಾಗುವುದು. ನಿನ್ನೆ ರಾತ್ರಿಯೇ ಮೃತದೇಹವನ್ನು ತೃಶೂರ್‌ಗೆ ಕೊಂಡುಹೋಗಿದ್ದು ಇಂದು ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂಗೆ ಒಳಪಡಿಸಲಾಗುವುದು ಎಂದು ತಿಳಿದು ಬಂದಿದೆ ಕಲಾಭವನ್ ಮಣಿ ಗೌರವಾರ್ಥ ಇಂದು ಅವರ ಹುಟ್ಟೂರು ಚಾಲಕ್ಕುಡಿ ನಗರದಲ್ಲಿ ಹರತಾಳ ಆಚರಿಸಲಾಗುತ್ತಿದೆ. ಮಣಿಯ ಮೃತದೇಹವನ್ನು ಇಂದು ಮಧ್ಯಾಹ್ನ ಸರಕಾರಿ ಬಾಯ್ಸಾ ಹೈಸ್ಕೂಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಇಡಪಳ್ಳಿ ಅಮೃತ ಆಸ್ಪತ್ರೆಯಲ್ಲಿ ನಿನ್ನೆ ರಾತ್ರೆ 7:15ಕ್ಕೆ ಸಿನೆಮಾಲೋಕವನ್ನೆಕಂಪಿಸಿದ ಮಣಿಯ  ಅನಿರೀಕ್ಷಿತ ನಿಧನ ಸಂಭವಿಸಿತ್ತು. ಅವರು ಸಹಜವಾಗಿ ಮೃತರಾಗಿಲ್ಲ ಎಂದು ಪೊಲೀಸ್ ಸ್ಟೇಶನ್‌ಗೆ ಅಜ್ಞಾತ ಫೋನ್ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಮೃತದೇಹದ ಪೋಸ್ಟ್‌ಮಾರ್ಂ ನಡೆಸಲು ತೀರ್ಮಾನಿಸಿದ್ದಾರೆ. ಕರುಳಿಗೆ ಸಂಬಂಧಿಸಿದ ಅನಾರೋಗ್ಯದಿಂದಾಗಿ ತುಂಬ ದಿವಸಗಳಿಂದ ಅವರು ಚಿಕಿತ್ಸೆಯಲ್ಲಿದ್ದರು. ಶನಿವಾರ ಸಂಜೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ವೆಂಟಿಲೇಟರ್‌ಗೆ ಹಸ್ತಾಂತರಿಸಲಾಗಿತ್ತು. ಆದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮಣಿಯವರ ದೇಹದಲ್ಲಿ ವಿಷಾಂಶಗಳು ಪತ್ತೆಯಾಗಿದೆ ಎಂದು ಆಸ್ಪತ್ರೆಗಳ ಮೂಲಗಳು ತಿಳಿಸಿವೆ. ಪೊಲೀಸರೂ ಇದನ್ನು ದೃಢೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪೋಸ್ಟ್ ಮಾರ್ಟಂಗೆ ಮುಂದಾಗಿದ್ದಾರೆ.

   

ಮಣಿ ತೀವ್ರ ಅಸ್ವಸ್ಥರಾಗಿದ್ದಾರೆಂದು ತಿಳಿದು ಚಾಲಕ್ಕುಡಿಯಿಂದ ಪೊಲೀಸರ ಒಂದು ತಂಡ ಕೊಚ್ಚಿಗೆ ಬಂದಿತ್ತು. ಮಣಿಯವರಿಂದ ಈ ತಂಡ ಹೇಳಿಕೆ ಪಡೆಯಲಿದೆಯೆಂದು ಹೇಳಲಾಗುತ್ತಿತ್ತು. ತಂಡ ತಲುಪುವ ಮೊದಲೇ ಮಣಿ ಇಹಲೋಕ ತ್ಯಜಿಸಿದ್ದರು. ಮಣಿಯ ದೇಹದಲ್ಲಿ ಮಿಥೈಲ್ ಆಲ್ಕೋಹಾಲ್ ಪತ್ತೆಯಾಗಿದೆಎಂದು ವೈದ್ಯರು ತಿಳಿಸಿದ್ದು. ಚಾಲಿಕ್ಕುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಣಿ ಇತ್ತೀಚೆಗೆ ತಮಿಳು ತೆಲುಗು ಚಿತ್ರರಂಗದಲ್ಲಿ ಹೆಚ್ಚು ಬಿಸಿಯಾಗಿದ್ದರು. ಹಾಗಿದ್ದರೂ ಅವರು ಉರಿಗೆ ಬಂದು ಗೆಳೆಯರೊಂದಿಗೆ ಬೆರೆಯುತ್ತಿದ್ದರು. ಚಾಲಕ್ಕಾಡ್‌ನ ಔಟ್‌ಹೌಸ್‌ನಲ್ಲಿ ಗೆಳೆಯರೊಂದಿಗೆ ಸಮಯ ಕಳೆಯುವುದು ಮಣಿಗೆ ಹೆಚ್ಚು ಇಷ್ಟದ ವಿಚಾರವಾಗಿತ್ತು. ಇಲ್ಲಿ ಮಿತಿ ಮೀರಿ ಮದ್ಯಪಾನ ಮಾಡಿದ್ದು ಮಣಿಯ ಮರಣಕ್ಕೆ ಕಾರಣವೆಂದು ಪೊಲೀಸರು ಮೊದಲು ಅಂದಾಜಿಸಿದ್ದರು. ಮಣಿಯ ಈ ಔಟ್ ಹೌಸ್‌ನ್ನು ಪೊಲೀಸರು ಈಗಾಗಲೇ ಪರಿಶೋಧಿಸಿದ್ದಾರೆ. ಮಣಿ ಮೃತರಾದ ಬಳಿಕ ಅವರ ಸಾವನ್ನು ಶಂಕಿಸಿ ಅಜ್ಞಾತ ಕರೆಯೊಂದು ಪೊಲೀಸ್ ಸ್ಟೇಶನ್‌ಗೆ ಬಂದಿದ್ದು ಅದರ ಮೂಲವನ್ನು ಕಂಡು ಹುಡುಕುವುದರಲ್ಲಿ ಪೊಲೀಸರು ವ್ಯಸ್ತರಾಗಿದ್ದಾರೆ. ಔಟ್ ಹೌಸ್‌ನಲ್ಲಿದ್ದ ಮದ್ಯ ಬಾಟ್ಲಿಗಳು ಮತ್ತು ಮದ್ಯದ ಸ್ಯಾಂಪಲ್‌ನ್ನು ರೂರಲ್ ಎಸ್ಪಿ ಕೆ. ಕಾರ್ತಿಕ್‌ರ ನೇತೃತ್ವದ ಪೊಲೀಸರ ತಂಡ ಸಂಗ್ರಹಿಸಿದೆ. ಮಣಿ ನಿಧನರಾದ ಬಳಿಕ ಅಮೃತ ಆಸ್ಪತ್ರೆಯ ಪರಿಸರದಲ್ಲಿ ಮಣಿಯ ಗೆಳೆಯರು ಗುಂಪು ಗೂಡಿದ್ದರು. ಇವರ ಬಗ್ಗೆಯೂ ಪೊಲೀಸರು ಸಂಶಯ ಪ್ರಕಟಿಸಿದ್ದಾರೆ. ಕೆಲವು ಪತ್ರಕರ್ತರೊಂದಿಗೆ ಇವರು ಘರ್ಷಣೆಗಿಳಿದಿದ್ದರು. ಈ ಹಿನ್ನೆಲೆಯಲ್ಲಿ ಮೃತದೇಹದ ಪೋಸ್ಟ್‌ಮಾರ್ಟಂ ನಡೆಸಲು ಪೊಲೀಸರು ನಿರ್ಧರಿಸಿದರು. ಮಣಿಯ ಚಾಲಕ ಮನೋಜ್ ಮತ್ತು ಸಮೀಪದ ವೈದ್ಯರು ಮಣಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಪೊಲೀಸರು ಇವರನ್ನೆಲ್ಲ ತನಿಖೆ ನಡೆಸಿದ್ದಾರೆ. ಔಟ್ ಹೌಸ್‌ನಲ್ಲಿ ಮದ್ಯಪಾನ ನಡೆಸಿದ ವೇಳೆ ವಿಷಪ್ರಾಶನವಾಗಿದೆ ಎಂದು ಪೊಲೀಸರು ಶಂಕಿಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News