ಇರಾಕ್‌ನಲ್ಲಿ ಆತ್ಮಾಹುತಿ ಕಾರ್‌ಬಾಂಬ್ ದಾಳಿ,27 ಮೃತ್ಯು 47 ಮಂದಿ ಗಾಯ
Update: 2016-03-07 11:57 IST
ಹಿಲ್ಲಾ, ಮಾರ್ಚ್.7: ಇರಾಕ್‌ನ ರಾಜಧಾನಿ ಬಗ್ದಾದ್ ನ ದಕ್ಷಿಣಕ್ಕಿರುವ ಹಿಲ್ಲಾ ಪಟ್ಟಣದ ಜನಜಂಗುಳಿಯ ಹೊರ ಪ್ರದೇಶದ ಚೌಕಿಯಲ್ಲಿ ಕಾರ್‌ಬಾಂಬ್ ಸ್ಫೋಟಿಸಿದ್ದು ಕೊನೇ ಪಕ್ಷ ಇಪ್ಪತ್ತೊಂಬತ್ತು ಮಂದಿ ಮೃತರಾಗಿದ್ದಾರೆ. ಹಿಲ್ಲಾದ ಉತ್ತರದ ಮುಖ್ಯ ಚೌಕಿಯನ್ನು ಗುರಿಮಾಡಿ ಆತ್ಮಾಹುತಿ ಕಾರ್‌ಬಾಂಬ್ ದಾಳಿ ನಡೆದಿದೆ. ಇಪ್ಪತ್ತೊಂಬತ್ತು ಮಂದಿ ಮೃತರಾಗಿ 47ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಲೆಫ್ಟಿನೆಂಟ್‌ವೊಬ್ಬರು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಾಕಲಾದ ಫೋಟೊದಲ್ಲಿ ಚೌಕಿಯ ಸುತ್ತಮುತ್ತ ಭಾರಿ ನಾಶನಷ್ಟವಾದಂತೆ ಕಾಣಿಸುತ್ತಿದೆ. ಹಿಲ್ಲಾದ ಆಸ್ಪತ್ರೆಯೊಂದರ ವೈದ್ಯರು ಗಾಯಾಳುಗಳಲ್ಲಿ ಕನಿಷ್ಠ ಹನ್ನೊಂದು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಬಾಗ್ದಾದ್ ದಕ್ಷಿಣದಲ್ಲಿ ಐಸಿಸ್‌ಗೆ ನಿಶ್ಚಿತ ತಾಣವಿಲ್ಲ. ಯಾಕೆಂದರೆ ಭದ್ರತಾ ಪಡೆ ಇಲ್ಲಿ ಭಾರೀ ಕಾರ್ಯಾಚರಣೆ ನಡೆಸಿ ಐಸಿಸ್‌ನ್ನು ಹಿಮ್ಮೆಟ್ಟಿಸಿತ್ತು.