ಕೈಮುಗಿದು ಬೇಡಿದರೂ ಸ್ಮ್ರತಿ ಹೊರಟು ಹೋದರು
ಆಗ್ರಾ,ಮಾರ್ಚ್.7: ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆ ಸ್ಮ್ರತಿ ಇರಾನಿ ರಸ್ತೆ ಅಪಘಾತದ ವೇಳೆ ರಸ್ತೆಯಲ್ಲಿ ಬಿದ್ದು ಚಡಪಡಿಸುತ್ತಿದ್ದ ಇಬ್ಬರು ಮಕ್ಕಳನ್ನು ನಿರ್ಲಕ್ಷಿಸಿ ಮುಂದಕ್ಕೆ ಪ್ರಯಾಣಿಸಿದ್ದಾರೆ ಎಂದು ಅಪಘಾತದಲ್ಲಿ ಬಲಿಯಾದ ವೈದ್ಯನ ಪುತ್ರಿ ದೂರಿದ್ದಾರೆ. ಯುಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕಳೆದ ಶನಿವಾರ ಸ್ಮತಿ ಇರಾನಿಯ ಬೆಂಗಾವಲು ವಾಹನ ಬೈಕ್ ಸವಾರರೊಬ್ಬರಿಗೆ ಢಿಕ್ಕಿ ಹೊಡೆದಿತ್ತು. ಆಗ್ರಾದ ವೈದ್ಯ ಡಾ. ರಮೇಶ್ ನಾಗರ್ ಮೃತರಾಗಿದ್ದರು.
ಆದರೆ ಸ್ಮ್ರತಿ ಇರಾನಿ ಅಪಘಾತದ ಬಳಿಕ ಟ್ವೀಟ್ ಮಾಡಿ ಅಪಘಾತ ಸಂಸ್ತ್ರಸ್ತರಿಗೆ ಸಹಾಯ ಮಾಡಿದ್ದಾಗಿ ಹೇಳಿಕೊಂಡಿದ್ದರು.
ಅವರ ಇಬ್ಬರು ಮಕ್ಕಳು ಗಾಯಗೊಂಡಿದ್ದರು. ಮಥುರಾದ ಮಾಂಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎಫ್ ಐಆರ್‌ನಲ್ಲಿ ಅಫಘಾತದಲ್ಲಿ ಕೆಳಗೆ ಬಿದ್ದು ಗಾಯಗೊಂಡಿದ್ದ ಮಕ್ಕಳನ್ನು ಗಮನಿಸುವ ಗೋಜಿಗೆ ಹೋಗದೆ ಸಚಿವೆ ಹೊರಟು ಹೋಗಿದ್ದರು ಎಂದು ವಿವರಿಸಲಾಗಿದೆ. ಮೃತ ವೈದ್ಯರು ಆಗ್ರಾದಿಂದ ಮದುವೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು. ಮಕ್ಕಳಾದ ಸಂದಲಿ(12) ಪಂಕಜ್(8) ಕೂಡಾ ಅವರ ಜೊತೆಇದ್ದರು.ಅವರ ಇನ್ನೊಬ್ಬ ಪುತ್ರ ಅಭಿಷೇಕ್ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದರು.