×
Ad

ಛತ್ತೀಸ್ಗಡ ಚರ್ಚ್ ದಾಂಧಲೆ: ಒಟ್ಟು ಏಳು ಮಂದಿಯ ಬಂಧನ

Update: 2016-03-07 15:33 IST

 ಛತ್ತೀಸ್‌ಗಡ,ಮಾರ್ಚ್.7: ಛತ್ತೀಸ್‌ಗಡದ ರಾಯ್‌ಪುರದಲ್ಲಿ ಕಳೆದ ರವಿವಾರ ಚರ್ಚ್‌ವೊಂದಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೆ ಪೀಠೋಪಕರಣಗಳನ್ನು ಪುಡಿಗುಟ್ಟಿದ ಆರೋಪದಲ್ಲಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕಿದ ಮೂರು ಬೈಕ್‌ಗಳ ಆಧಾರದಲ್ಲಿ ದುಷ್ಕರ್ಮಿಗಳನ್ನು ಬಂಧಿಸಲಾಗಿದೆಎಂದು ಅವರು ತಿಳಿಸಿದ್ದಾರೆ. ಮಹಿಳೆಯರ ಬಟ್ಟೆಗಳನ್ನು ಹರಿದು ಅಪಮಾನಿಸಿದ ಹೇಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗೃಹಖಾತೆ ಆರೋಪಿಗಳನ್ನು ಆದಷ್ಟು ಶೀಘ್ರ ಬಂಧಿಸುವಂತೆ ಛತ್ತೀಸ್ ಗಡ ಸರಕಾರಕ್ಕೆ ಸೂಚಿಸಿತ್ತು.

 ಆನಂತರ ತನಿಖೆಯನ್ನು ತೀವ್ರಗೊಳಿಸಲಾಗಿತ್ತು. ಗೃಹಖಾತೆಯ ರಾಜ್ಯಸಚಿವ ಕಿರಣ್ ರಿಜಿಜು ಈ ಕುರಿತು ಪ್ರತಿಕ್ರಿಯಿಸಿ ಛತ್ತೀಸ್ ಗಡ ಸರಕಾರ ಕಾರ್ಯಾಚರಣೆ ಆರಂಭಿಸಿದೆ. ತಪ್ಪಿತಸ್ಠರನ್ನು ಸಹಿಸಲಾಗದು ಎಂದು ಹೇಳಿದ್ದರು. ಪೊಲೀಸರ ಪ್ರಕಾರ ಕಳೆದ ರವಿವಾರ ಇಪ್ಪತ್ತಕ್ಕೂ ಅಧಿಕ ಮಂದಿ ಚರ್ಚ್ ದಾಳಿಯಲ್ಲಿ ಪಾಲ್ಗೊಂಡಿದ್ದರು. ಚರ್ಚ್‌ನ ಪೀಠೋಪಕರಣಗಳನ್ನು ಮುರಿದಿದ್ದಲ್ಲದೆ ಅಲ್ಲಿದ್ದ ಮಹಿಳೆಯರ ಮೇಲೆಯನ್ನೂ ಥಳಿಸಿದ್ದರು. ಛತ್ತೀಸ್‌ಗಡದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ರಮಣ್ ಸಿಂಗ್ ಅಲ್ಲಿನ ಮುಖ್ಯಮಂತ್ರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News