ಕನ್ಹಯ್ಯರ ತಲೆಗೆ ಬಹುಮಾನ ಘೋಷಿಸಿದವನ ತಲೆಗೆ 21 ಲಕ್ಷರೂ. ಬಹಮಾನ ನೀಡುವೆ: ಸಮಾಜವಾದಿ ಪಾರ್ಟಿಯ ರಾಮ್‌ಪ್ರಕಾಶ್ ಶಾಕ್ಯ
ಲಕ್ನೊ, ಮಾರ್ಚ್.7: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಪ್ರಕರಣದಲ್ಲಿ ರಾಜಕಾರಣಿಗಳು ನೀಡುತ್ತಿರುವ ಹೇಳಿಕೆಗಳ ಮಹಾಪೂರ ನಿಲ್ಲುವಂತೆ ಗೋಚರಿಸುತ್ತಿಲ್ಲ. ಉತ್ತರ ಪ್ರದೇಶದಲ್ಲೀಗ ತಲೆ ರಾಜಕಾರಣ ರಾರಾಜಿಸತೊಡಗಿದೆ. ಇತ್ತೀಚಿಗಷ್ಟೇ ಬಿಜೆಪಿ ನಾಯಕನೊಬ್ಬ ಕನ್ಹಯ್ಯಿನ ನಾಲಿಗೆಯನ್ನು ಕತ್ತರಿಸಿ ತರುವವರಿಗೆ ಬಹುಮಾನ ಘೋಷಿಸಿ ಭಾರೀ ಸುದ್ದಿ ಮಾಡಿದ್ದ. ಇದೇ ರೀತಿ ಕನ್ಹಯ್ಯಿರ ಮೇಲೆ ಬಹುಮಾನ ಘೋಷಿಸಿದ ಬಿಜೆಪಿ ನಾಯಕನ ತಲೆಯನ್ನು ತರುವವರಿಗೆ 21 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸಮಾಜವಾದಿ ಪಕ್ಷದ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ರಾಮ್‌ಪ್ರಕಾಶ್ ಶಾಕ್ಯ ಘೋಷಿಸಿದ್ದಾರೆ.
ವರದಿಯಾಗಿರುವ ಪ್ರಕಾರ ಸೌರಿಕ್ ರೋಡ್‌ನಲ್ಲಿ ಆಯೋಜಿಸಲಾದ ಸಮಾಜವಾದಿ ಪಕ್ಷದ ಸಭೆಯೊಂದರಲ್ಲಿ ರಾಮ್ ಪ್ರಕಾಶ್ ಶಾಕ್ಯ ಎಮ್‌ಎಲ್‌ಸಿ ಚುನಾವಣೆಯಲ್ಲಿ ಬಿಜೆಪಿಯನ್ನು ವೈಟ್ ವಾಶ್ ಮಾಡಿದ್ದೇವೆ. ಈಗ ಯಾವ ಬಿಜೆಪಿ ನಾಯಕ ಕನ್ಹಯ್ಯರ ತಲೆಗೆ ಹನ್ನೊಂದು ಲಕ್ಷ ಬಹುಮಾನ ಘೋಷಿಸಿದ್ದಾನೋ ಅವನ ತಲೆಯನ್ನು ತುಂಡರಿಸಿ ತಂದವರಿಗೆ ತನ್ನ ವತಿಯಿಂದ 21 ಲಕ್ಷ ಬಹುಮಾನ ನೀಡಲಿದ್ದೇನೆ ಎಂದು ಘೋಷಿಸಿದ್ದಾರೆ.
ಈ ಮೊದಲು ಕನ್ಹಯ್ಯರ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಬದಾಯೂಂನ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಕುಲ್‌ದೀಪ್ ವಾಷ್ಣೋಯಿ ಘೋಷಿಸಿದ್ದರು. ಅವರು ಈಗಲೂ ಈ ಮಾತಿನಲ್ಲಿಸ್ಥಿರವಾಗಿದ್ದಾರೆ. ಅವರನ್ನು ಮಾನಸಿಕ ತಕರಾರಿರುವ ಮನುಷ್ಯ ಎಂದು ಕ್ಷೇತ್ರ ಬಿಜೆಪಿ ಅಧ್ಯಕ್ಷ ಹೇಳಿದ್ದರು. ಇದರ ವಿರುದ್ಧ ಗರಂ ಆಗಿದ್ದ ಕುಲ್‌ದೀಪ್ ವಾಷ್ಣೋಯಿ ತನಗಿದೆಯೆನ್ನುವ ರೋಗವನ್ನು ಅವರು ಸಾಬೀತು ಪಡಿಸಬೇಕು. ಇಲ್ಲದಿದ್ದರೆ, ಅವರ ಮೇಲೆ 25ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸುವೆ ಎಂದು ಸವಾಲೆಸೆದಿದ್ದಾರೆ. ಹಿಂದು ಮಹಾ ಸಭಾ ಕುಲ್‌ದೀಪ್‌ರನ್ನು ಬೆಂಬಲಿಸಿದ್ದು ಮಹಾಸಭಾದ ಪ್ರದೇಶ ಸಂಯೋಜಕ್ ಮುಕೇಶ್ ಸಿಂಗ್ ಪಟೇಲ್ ಎಂಬಾತ ಭಾರತ ಮಾತೆಯನ್ನು ಅಪಮಾನಿಸುವವರನ್ನು ಬಹಿರಂಗವಾಗಿ ಕೊಲೆಗೈಯ್ಯುಲಾಗುವುದು ಎಂದು ಗುಡುಗಿದ್ದಾನೆ.