ಅಕ್ಷಯ್ ಕುಮಾರ್ ರುಸ್ತುಂ ವಿಸ್ಮಯ!
Update: 2016-03-07 16:56 IST
ನೌಕಾಪಡೆ ಅಧಿಕಾರಿಯಾಗಿ ಅಕ್ಷ್ ಕುಮಾರ್ ಕಾಣಿಸಿಕೊಳ್ಳಲಿರುವ ನೀರಜ್‌ಪಾಂಡೆ ನಿರ್ದೇಶನದ ‘ರುಸ್ತುಂ’ ಸಾಹಸ ಪ್ರಣಯಚಿತ್ರದ ಕುತೂಹಲಕಾರಿ ಮೊದಲ ಪೋಸ್ಟರ್ ಇದೀಗ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದೆ.
48 ವರ್ಷದ ಈ ನಟನ ವರ್ಷದ ಮೊದಲ ಚಿತ್ರ ಏರ್‌ಲಿಫ್ಟ್ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಕಟು ವಿಮರ್ಶೆಗೆ ಒಳಗಾಗಿತ್ತು. ಇದೀಗ ಹೊಸ ಚಿತ್ರದ ಮೊದಲ ಪೋಸ್ಟರ್‌ನಲ್ಲಿ ಲಿಯೆನಾ ಡಿಕ್ರೂಜ್ ಕಾಣಿಸಿಕೊಂಡಿದ್ದಾರೆ. ಬೆಳಕು- ನೆರಳಿನ ಆಟ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು, ಇದಕ್ಕೆ ವಿಸ್ಮಯ ದೃಶ್ಯದ ಲುಕ್ ನೀಡಿದೆ. ಕಳೆದ ತಿಂಗಳು ಅಕ್ಷಯ್, ಈ ಚಿತ್ರದಲ್ಲಿ ತಮ್ಮ ಠೀವಿ ಹೇಗಿರುತ್ತದೆ ಎಂದು ಬಹಿರಂಗಪಡಿಸಿದ್ದರು.
1950ರ ದಶಕದ ಸೆಟ್ ಹಾಗೂ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ರುಸ್ತುಂ ಸ್ವಾತಂತ್ರ್ಯೋತ್ಸವದ ಪೂರ್ವಭಾವಿಯಾಗಿ ಆಗಸ್ಟ್ 12ರಂದು ತೆರೆ ಮೇಲೆ ಬರುವ ನಿರೀಕ್ಷೆ ಇದೆ. ಅವರ ಏರ್‌ಲಿಫ್ಟ್ಟ್ ಚಿತ್ರ ಗಣರಾಜ್ಯೋತ್ಸವಕ್ಕೆ ನಾಲ್ಕು ದಿನ ಮೊದಲು ಬಿಡುಗಡೆಯಾಗಿತ್ತು.