×
Ad

ವಿಜಯ್ 60ನೆ ಚಿತ್ರಕ್ಕೆ ಮೂವರು ನಾಯಕಿಯರು

Update: 2016-03-07 17:00 IST

ಳಯದಳಪತಿ ವಿಜಯ್ ಚಿತ್ರಗಳೆಂದರೆ ಬಾಕ್ಸ್ ಆಫೀಸಿನಲ್ಲಿ ಮೋಸವಿಲ್ಲವೆಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ರೋಮ್ಯಾನ್ಸ್, ಆ್ಯಕ್ಷನ್ ಸಹಿತ ಎಲ್ಲ ಪಾತ್ರಗಳನ್ನೂ ಲೀಲಾಜಾಲವಾಗಿ ನಿರ್ವಹಿಸುವ ವಿಜಯ್ ಚಿತ್ರರಂಗ ಪ್ರವೇಶಿಸಿ 25 ವರ್ಷಗಳೇ ಕಳೆದಿವೆ. 1992ರಲ್ಲಿ ನಾಳೈ ತೀರ್ಪು ಚಿತ್ರದ ಮೂಲಕ ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟ ವಿಜಯ್ ಈಗ ತಮಿಳು ಪ್ರೇಕ್ಷಕರ ಮಾಸ್ ಹೀರೋ. ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಕಾವಲನ್, ತುಪಾಕಿ ,ತಲೈವಾ ಚಿತ್ರಳು ಅವರೆ ಇಮೇಜನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿದ್ದವು.

     ಅವರ 60ನೆ ಚಿತ್ರದ ಬಗ್ಗೆ ತಮಿಳು ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ವಿಜಯ್‌ಗೆ ನಾಯಕಿಯರಾಗಿ ಮೂವರು ನಟಿಯರು ನಟಿಸಲಿದ್ದಾರೆಂಬುದು ಇದೀಗ ಲೇಟೆಸ್ಟ್ ಆಗಿ ಬಂದಿರುವ ಸುದ್ದಿ. ಬಹುಭಾಷಾ ನಟಿ ಕೀರ್ತಿ ಸುರೇಶ್, ವಿಜಯ್ ಚಿತ್ರಕ್ಕೆ ನಾಯಕಿಯಾಗಿ ನಟಿಸುವುದು ಈಗಾಗಲೇ ಪಕ್ಕಾ ಆಗಿದೆ. ಇದೀಗ ಇನ್ನಿಬ್ಬರು ನಾಯಕಿಯರು ಚಿತ್ರಕ್ಕೆ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಕಾಜಲ್‌ಅಗರ್‌ವಾಲ್ ಹಾಗೂ ಉದಯೋನ್ಮುಖ ನಟಿ ಐಶ್ವರ್ಯಾ ರಾಜೇಶ್, ನಾಯಕಿಯರಾಗಿ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಇವರ ಜೊತೆಗೆ ಚಿತ್ರದಲ್ಲಿ ವಿಜಯ್‌ರ ಸಹೋದರಿಯಾಗಿ ಮಲಯಾಳಂನ ಪ್ರತಿಭಾವಂತ ನಟಿ ಮಿಯಾ ಜಾರ್ಜ್ ಕೂಡಾ ನಟಿಸಲಿದ್ದಾರೆಂಬ ಸುದ್ದಿ ಕೇಳಿಬಂದಿತ್ತು. ಆದರೆ ಅದನ್ನು ಮಿಯಾ ಖುದ್ದಾಗಿ ದೃಢಪಡಿಸಿಲ್ಲ.

ವಿಜಯ್ ಅಭಿನಯದ ಅಳಗಿಯ ತಮಿಳ್ ಮಗನ್ ಚಿತ್ರ ನಿರ್ದೇಶಿಸಿದ್ದ ಭರತನ್ ‘ಇಳಯದಳಪತಿ’ಯ 60ನೆ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News