‘ಕನ್ಹಯ್ಯ, ಹೇಳುವ ವಿಷಯಗಳನ್ನು ಖಚಿತಪಡಿಸಿಕೊಳ್ಳಿ’ ವಿದ್ಯಾರ್ಥಿ ನಾಯಕನಿಗೆ ಜೆಎನ್‌ಯು ಪ್ರಾಧ್ಯಾಪಕನ ಕಿವಿ ಮಾತು

Update: 2016-03-08 10:10 GMT

ನವದೆಹಲಿ : ‘‘ಕನ್ಹಯ್ಯ ನೀವು ಹೇಳುವ ವಿಷಯಗಳನ್ನು ಮೊದಲು ಖಚಿತಪಡಿಸಿಕೊಳ್ಳಿ’’ ಹೀಗೆಂದು ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್‌ನನ್ನು ಉದ್ದೇಶಿಸಿ ಹೇಳಿದವರು ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರೊಫೆಸರ್ ಆಗಿರುವ ಮಕರಂದ್ ಪರಾಂಜಪೆ.

ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗುತ್ತಿರುವ ಭಾಷಣ ಮಾಲಿಕೆಯ 15ನೇ ಆವೃತ್ತಿಯಲ್ಲಿ ‘ಅನ್‌ಸಿವಿಲ್ ವಾರ್ಸ್‌: ಟಾಗೋರ್, ಗಾಂಧಿ, ಜಎಎನ್‌ಯುಎಂಡ್ ವಾಟ್ಸ್ ಲೆಫ್ಟ್ ಆಫ್ ದಿ ನೇಶನ್’ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದ ಪರಾಂಜಪೆ, ಕನ್ಹಯ್ಯ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಜೆಎನ್‌ಯು ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣದಲ್ಲಾದ ಪ್ರಮಾದಗಳನ್ನು ಬೊಟ್ಟು ಮಾಡಿದರು ‘‘ನೀವು ಗೋಲ್ವಾಲ್ಕರ್ ಅವರು ಮುಸ್ಸೋಲಿನಿಯನ್ನು ಭೇಟಿ ಮಾಡಿದ್ದರೆಂದು ಹೇಳಿದಿರಿ. ನಿಜಾಂಶ ಗೊತ್ತೇನು? ಮುಸ್ಸೋಲಿನಿಯನ್ನು ಭೇಟಿ ಮಾಡಿದವರು ಮೂಂಜೆ. ಅವರೆಲ್ಲರೂ ಫ್ಯಾಸಿಸ್ಟರಿಂದ ಪ್ರಭಾವಿತರಾಗಿರಲಿಲ್ಲವೆಂದು ನಾನು ಹೇಳುತ್ತಿಲ್ಲ. ಅವರು ಪ್ರಭಾವಿತರಾಗಿದ್ದರು. ನಿರಂಕುಶವಾದಿ ಆಡಳಿತ ಹೊಂದುವುದು ಉತ್ತಮವೆಂದು ಅವರ ಅಭಿಪ್ರಾಯವಾಗಿತ್ತು. ಯಾವುದು ವಾಸ್ತವಾಂಶ ಹಾಗೂ ಯಾವುದು ಅಲ್ಲ ಎಂಬುದರ ಬಗ್ಗೆ ನಾವು ಒಪ್ಪಿಕೊಳ್ಳೋಣ. ಪ್ರಜಾಪ್ರಭುತ್ವ ವಿರೋಧಿ ಸನ್ನಿವೇಶವನ್ನು ಫ್ಯಾಸಿಸಂ ಎನ್ನಲಾಗುತ್ತದೆ. ಅಂತೆಯೇ ಸ್ಟಾಲಿನಿಸಿಂ ಕೂಡ. ನ್ಯಾಯಾಂಗದ ಕೊಲೆಯೆಂದು ಹೇಳಲಾಗುತ್ತಿರುವ ಒಂದುಘಟನೆಯಿಂದಾಗಿ ಇಷ್ಟೊಂದು ದೊಡ್ಡ ರಾದ್ಧಾಂತ ನಡೆದ ದೇಶ ನಮ್ಮದು ಎಂದು ನನಗೆ ಹೆಮ್ಮೆಯಾಗುತ್ತದೆ,’’ಎಂದು ಪರಾಂಜಪೆ ಹೇಳಿದರು.

‘‘ಸ್ಟಾಲಿನ್ ದೇಶದಲ್ಲಿ 1920ರಿಂದ 1950 ತನಕ ಎಷ್ಟೊಂದು ಇಂತಹ ಘಟನೆಗಳು ನಡೆದಿತ್ತೆಂದು ನಿಮಗೆ ಗೊತ್ತೇನು?’’ ಎಂದೂ ಪರಾಂಜಪೆ ಕನ್ಹಯ್ಯೆರನ್ನುದ್ದೇಶಿಸಿ ತಮ್ಮ ಭಾಷಣದಲ್ಲಿ ಪ್ರಶ್ನಿಸಿದರು. ಪರಾಂಜಪೆಯವರು ಮೇಲಿನ ಮಾತುಗಳನ್ನು ಹೇಳಲು ಕಾರಣವಿದೆ. ತಮ್ಮ ಭಾಷಣದಲ್ಲಿಅವರು ತಾವು ತಮ್ಮ ವಿಭಾಗದಸಮೀಪ ನಡೆದುಕೊಂಡು ಹೋಗುತ್ತಿದ್ದಾಗ ಬೈಸಿಕಲ್ಲಿನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬಕೈಯಲ್ಲಿ ‘ನಾನು ರಾಷ್ಟ್ರ ವಿರೋಧಿಯಲ್ಲ’ಎಂದು ಬರೆಯಲಾಗಿರುವಘೋಷಣಾ ಪತ್ರವನ್ನು ಹಿಡಿದು ಹೋಗುತ್ತಿರುವುದನ್ನು ನೋಡಿದ ಬಗ್ಗೆ ಹೇಳಿದರು. ‘ನಾನು ಜೆಎನ್‌ಯು ವಿರೋಧಿಯಲ್ಲ’ ಎಂಬ ಘೋಷಣೆಯುಳ್ಳ ಫಲಕವನ್ನು ಹಿಡಿದು ನಡೆಯಬೇಕಾದ ಅಗತ್ಯವಿಲ್ಲವೆಂದುಕೊಳ್ಳುತ್ತೇನೆ,’’ಎಂದರು.

ಒಂದು ಹಂತದಲ್ಲಿ ಎಷ್ಟು ವಿದ್ಯಾರ್ಥಿಗಳು ಕಾಶ್ಮೀರಿ ಪ್ರತ್ಯೇಕತಾವಾದವನ್ನು ಸಮರ್ಥಿಸುವರು ಎಂದು ಅವರು ಕೇಳಿದಾಗ ಕೆಲವೇ ಕೆಲವು ಕೈಗಳು ಮೇಲಕ್ಕೆತ್ತಿದ್ದವು, ನಂತರ ಕನ್ಹಯ್ಯ ಕೆಲವು ಘೋಷಣೆಗಳನ್ನು ಕೂಗಿದರೆ ಮತ್ತೆ ಕೆಲವುವಿದ್ಯಾರ್ಥಿಗಳು ಆತನನ್ನು ಹೀಗಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News