ತಲಶ್ಶೇರಿಯಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಹಲ್ಲೆ: ಆಸ್ಪತ್ರೆಗೆ ದಾಖಲು
Update: 2016-03-08 15:51 IST
ತಲಶ್ಶೇರಿ, ಮಾ. 8: ಪಾನೂರಿನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ್ನು ಇರಿಯಲಾಗಿದೆ. ಆಟೋ ಚಾಲಕ ಅನಿಯಾರಂ ವಲಿಯಾಂಡಿ ಬಿಜು ಇರಿತಕ್ಕೊಳಗಾದ ವ್ಯಕ್ತಿಯೆಂದು ಗುರುತಿಸಲಾಗಿದೆ.
ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಆಟೋ ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಚಾಲಕನ ಮೇಲೆ ಹಲ್ಲೆ ಎಸಗಲಾಗಿದೆ.
ಕೈಕಾಲುಗಳಿಗೆ ಗಾಯಗೊಂಡಿರುವ ಇವರನ್ನು ತಲಶ್ಶೇರಿ ಮಿಶನ್ ಆಸ್ಪತ್ರೆಗೆ ಸೇರಿಸಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ಮೆಡಿಕಲ್ ಕಾಲೇಜಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಚೆಕ್ಲಿ ಎಂಬಲ್ಲಿಂದ ವಿದ್ಯಾರ್ಥಿಗಳನ್ನು ಕರೆ ತರುತ್ತಿದ್ದಾಗ ಅಕ್ರಮಿಗಳು ಆಟೋ ತಡೆದಿದ್ದಾರೆ. ಆಟೋ ರಸ್ತೆಗೆ ಮಗುಚಿ ಬಿದ್ದಿತ್ತು. ಆಟೋದ ಅಡಿಯಿಂದ ಬಿಜುವನ್ನು ಮೇಲಕ್ಕೆತ್ತಿ ನಂತರ ತಲವಾರು ಹಲ್ಲೆ ನಡೆಸಲಾಗಿತ್ತೆಂದು ವರದಿಯಾಗಿದೆ.