ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಕ್ಕೆ ಪ್ರಧಾನಿ ಹೋಗುವುದಿಲ್ಲ
Update: 2016-03-08 16:45 IST
ಹೊಸದಿಲ್ಲಿ, ಮಾ. 8 : ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ನಡೆಸುವ ಮೂರು ದಿನಗಳ ವರ್ಲ್ಡ್ ಕಲ್ಚರ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಸೋಮವಾರವಷ್ಟೇ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದರು.
ಪ್ರಧಾನ ಮಂತ್ರಿಗೆ ರಕ್ಷಣೆ ಒದಗಿಸುವ ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್ ಕಾರ್ಯಕ್ರಮದ ಸ್ಥಳದಲ್ಲಿ ಸುರಕ್ಷತಾ ಸಮಸ್ಯೆ ಉಂಟಾಗಬಹುದು ಎಂದಿರುವುದು ಇದಕ್ಕೆ ಕಾರಣವೆಂದು ಹೇಳಲಾಗಿದೆ.
ಈ ಬೃಹತ್ ಕಾರ್ಯಕ್ರಮಕ್ಕಾಗಿ ಮಾಡಲಾದ ನಿರ್ಮಾಣಗಳಿಂದ ಯಮುನಾ ನದಿ ತೀರ ಹಾಗು ಸುತ್ತಮುತ್ತಲ ಪರಿಸರಕ್ಕೆ ಭಾರೀ ಹಾನಿಯಾಗಿದೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದಕ್ಕಾಗಿ ಆರ್ಟ್ ಆಫ್ ಲಿವಿಂಗ್ ಗೆ 120 ಕೋಟಿ ರೂಪಾಯಿ ದಂಡ ಹಾಕುವ ಬಗ್ಗೆಯೂ ಎನ್ ಜಿ ಟಿ ನಾಳೆ ತನ್ನ ತೀರ್ಪನ್ನು ನೀಡಲಿದೆ.