×
Ad

ಭಾರತದ ಮೊದಲ ಪ್ರಣಾಳ ಶಿಶು ಈಗ ಅಮ್ಮ ...!

Update: 2016-03-08 23:52 IST

ಮುಂಬೈ, ಮಾ.8: ಮೂವತ್ತು ವರ್ಷಗಳ ಹಿಂದೆ ಮುಂಬೈನ ಹರ್ಷಾ ಭಾರತದ ಮೊದಲ ಪ್ರಣಾಳ ಶಿಶುವಾಗಿ ಜನಿಸಿ ಗಮನ ಸೆಳೆದಿದ್ದರು. ಇದೀಗ ಹರ್ಷಾ ಗಂಡು ಮಗುವಿನ ತಾಯಿಯಾಗಿದ್ದಾರೆ. ಶಿವರಾತ್ರಿ ದಿನವಾಗಿರುವ ಸೋಮವಾರ ಹರ್ಷಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹರ್ಷಾ ಮತ್ತು ದಿವ್ಯಪಾಲ್ ಷಾ ವಿವಾಹ 2015ರಲ್ಲಿ ನಡೆದಿತ್ತು. ಈ ದಂಪತಿಗೆ ಮೊದಲ ಮಗು ಜನಿಸಿದೆ. ಮಗು ಆರೋಗ್ಯವಾಗಿದೆ. 1986ರಲ್ಲಿ ಹರ್ಷಾ ಪ್ರಣಾಳ ಶಿಶುವಾಗಿ ಜನಿಸಲು ನೆರವಾಗಿದ್ದ ಅದೇ ವೈದ್ಯರ ತಂಡ ಜಸ್ಲೊಕ್ ಆಸ್ಪತ್ರೆಯಲ್ಲಿ ಹರ್ಷಾಳ ಹೆರಿಗೆಗೆ ನೆರವಾಗಿದೆ ಎನ್ನುವುದು ವಿಶೇಷ. ಡಾ.ಇಂದಿರಾ ಹಿಂದುಜಾ ನೇತೃತ್ವದ ವೈದ್ಯರ ತಂಡ ದೇಶದ ಮೊದಲ ಪ್ರಣಾಳ ಶಿಶುವನ್ನು ಹೊರತರುವಲ್ಲಿ ಯಶಸ್ವಿಯಾಗಿತ್ತು. ಭಾರತದ ಮೊದಲ ಪ್ರಣಾಳ ಶಿಶು ಈಗ ಅಮ್ಮ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News