"ನಾನು ಮನಮೋಹನ್ ಸಿಂಗ್‌ರಂತೆ ಅರ್ಥಶಾಸ್ತ್ರಜ್ಞ ಅಲ್ಲ. ಆದರೆ ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ":
ಹೊಸದಿಲ್ಲಿ, ಮಾ.9: ನಾನು ಮನಮೋಹನ್ ಸಿಂಗ್ ಅವರಂತೆ ಅರ್ಥಶಾಸ್ತ್ರಜ್ಞ ಅಲ್ಲ. ಆದರೆ ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ.
ರಾಜ್ಯ ಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಮೋದಿ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆದಿದೆ. 300 ತಿದ್ದುಪಡಿಗಳು ಅಂಗೀಕಾರವಾಗಿದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ರೈತರ ಬಗ್ಗೆ ಕಾಳಜಿ ವಹಿಸಿರುವ ಕೇಂದ್ರ ಸರಕಾರ 2022ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ ಎಂದರು.
ಸರಕಾರದ ಮುದ್ರಾ ಬ್ಯಾಂಕ್ ಯೋಜನೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ,ಹಿಂದುಳಿದ ಸಮುದಾಯ ಮತ್ತು ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಾಗಿದೆ.ಸ್ವಚ್ಛತೆ ಎಲ್ಲಕ್ಕಿಂತ ಮುಖ್ಯವಾದುದು. ಸ್ವಚ್ಛತೆಯ ಕಡೆಗೆ ಗಮನ ಹರಿಸದಿದ್ದರೆ ರೋಗ ಬರುತ್ತದೆ. ಚಿಕಿತ್ಸೆಗೆ ಹಣ ಖರ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಾವೆಲ್ಲರೂ ರಾಷ್ಟ್ರಪತಿಗಳ ಸಲಹೆ ಪಾಲಿಸಬೇಕು. ದೇಶದ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಬೇಕಾಗಿದೆ. ಪಾರದರ್ಶಕತೆಯ ಕಡೆಗೆ ಸರಕಾರ ಹೆಚ್ಚಿನ ಮಹತ್ವ ನೀಡಿದೆ. ಉತ್ತಮ ಆಡಳಿತಕ್ಕಾಗಿ ಉತ್ತರದಾಯಿತ್ವದ ಅಗತ್ಯವಿದೆ. ಹಲವು ವರ್ಷಗಳಿಂದ ಪ್ರಾಋಂಭವಾಗದೆ ಉಳಿದ 300 ಯೋಜನೆಗಳ ಪರಿಶೀಲಿಸಿದ್ದೇವೆ. ಸುಮಾರು 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳು ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾರ್ಯಗತಗೊಂಡಿದೆ ಎಂದು ಮೋದಿ ಹೆಳಿದರು
1.ಗಂಟೆ 5 ನಿಮಿಷಗಳ ಭಾಷಣ
ಪ್ರಧಾನಿ ಮೋದಿ ಮಧ್ಯಾಹ್ನ 2 ಗಂಟೆಗೆ ಭಾಷಣ ಆರಂಭಿಸಿದ್ದರು.3:05ಕ್ಕೆ ಭಾಷಣ ಕೊನೆಗೊಳಿಸಿದರು. ವಿಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
.