×
Ad

ಕೇಂದ್ರ ಸಚಿವರ ಸಹೋದರ ಪುತ್ರಿ ಪರೀಕ್ಷಾ ಭೀತಿಯಲ್ಲಿ ಆತ್ಮಹತ್ಯೆಗೆ ಶರಣು

Update: 2016-03-09 18:33 IST

ಮಧ್ಯಪ್ರದೇಶ,ಮಾರ್ಚ್.9: ಮಧ್ಯಪ್ರದೇಶದಲ್ಲಿ ಪರೀಕ್ಷಾ ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಘಟನೆಗಳು ನಡೆಯುತ್ತಿವೆ. ಮೋದಿ ಸರಕಾರದಲ್ಲಿ ಸಚಿವರಾಗಿರುವ ತಾವರ್‌ಚಂದ್ ಗೆಹ್ಲೋಟ್‌ರ ಸಹೋದರ ಪುತ್ರಿ ಪರೀಕ್ಷೆ ಒತ್ತಡದಿಂದ ಆತ್ಮಹತ್ಯೆಗೈದಿರುವುದು ವರದಿಯಾಗಿದೆ. ಕಳೆದ ನಲ್ವತ್ತು ದಿವಸಗಳಲ್ಲಿ ಒಂಬತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಮರಣಕ್ಕೆ ಶರಣಾಗಿದ್ದಾರೆ.

 ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ ತಾವರ್‌ಚಂದ್ ಗೆಹ್ಲೋಟ್‌ರ ಹದಿನೇಳು ವರ್ಷದ ಸಹೋದರ ಪುತ್ರಿ ಮೋನಿಕಾ ಗೆಹ್ಲೋಟ್‌ ಉಜ್ಜೈನಿಯ ತಮ್ಮಮನೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾಳೆ. ಅವಳು ಲೆಕ್ಕ ಪರೀಕ್ಷೆಯಲ್ಲಿ ಹಿಂದುಳಿದಿದ್ದಳು ಎನ್ನಲಾಗಿದೆ. ಇದರಿಂದ ಅವಳು ತುಂಬ ಖಿನ್ನಳಾಗಿದ್ದಳು.

ಮೋನಿಕಾ ಹನ್ನೆರಡನೆ ತರಗತಿ ವಿದ್ಯಾರ್ಥಿನಿ. ತಂದೆ ಕೈಲಾಶ್‌ಚಂದ್ ಗೆಹ್ಲೋಟ್‌ಸ್ವಯಂ ಶಿಕ್ಷಕರಾಗಿದ್ದಾರೆ. ಅವಳ ಮರಣಾನಂತರ ಕುಟುಂಬದಲ್ಲಿ ವಿಷಾದದ ಛಾಯೆ ಆವರಿಸಿದೆ.ಮನೆಯ ಹಿರಿ ಮಗಳು ಇಂತಹ ಹೆಜ್ಜೆ ಇಡುವಳೆಂದು ಯಾರೂ ಊಹಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News