ಮಲ್ಯ ಲಂಡನ್‌ನ ಎಸ್ಟೇಟ್ ನಲ್ಲಿ ಪತ್ತೆ
Update: 2016-03-10 13:31 IST
ಲಂಡನ್, ಮಾ.10: ಸಾಲದ ಹೊರೆಯಿಂದ ತತ್ತರಿಸಿರುವ ಮದ್ಯದ ದೊರೆ ವಿಜಯ್ ಮಲ್ಯ ಲಂಡನ್ ನಲ್ಲಿರುವ ತನ್ನ ಎಸ್ಟೇಟ್ ನಲ್ಲಿ ಪತ್ತೆಯಾಗಿದ್ದಾರೆ.
ಲಂಡನ್‌ನ ಹೊರ ವಲಯದಲ್ಲಿರುವ ಈ ಎಸ್ಟೇಟ್‌ನಲ್ಲಿ ಮಲ್ಯ ಅರಾಮವಾಗಿದ್ದಾರೆ. ಮೂವತ್ತು ಎಕ್ರೆ ಪ್ರದೇಶದಲ್ಲಿರುವ ತನ್ನ ಎಸ್ಟೇಟ್‌ಗೆ ಮಲ್ಯ ಸದ್ದಿಲ್ಲದೆ ಭಾರತದಿಂದ ತೆರಳಿದ್ದಾರೆ.