×
Ad

ಮಲ್ಯಗೆ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ

Update: 2016-03-11 15:35 IST

ಮುಂಬೈ, ಮಾ.11:ಅಕ್ರಮವಾಗಿ ಸಾಲ ಪಡೆದಿರುವ ವಿಚಾರಕ್ಕೆ ಸಂಬಂಧಿಸಿ ಉದ್ಯಮಿ ವಿಜಯ್‌ ಮಲ್ಯಗೆ ಜಾರಿ ನಿರ್ದೇಶನಾಲಯವು(ಇಡಿ) ಸಮನ್ಸ್ ಜಾರಿ ಮಾಡಿದೆ.
ಮಾ.18ರಂದು ಮುಂಬೈನ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ವಿಚಾರಣೆಗೆ  ಹಾಜರಾಗುವಂತೆ ಇ-ಮೇಲ್ ಮೂಲಕ ಸಮನ್ಸ್   ಜಾರಿ ಮಾಡಲಾಗಿದೆ.
ಇದೇ ವೇಳೆ ಕಿಂಗ್‌ಫಿಷರ್‌ ಏರ‍್ ಲೈನ್ಸ್‌ ನ ಸೇವಾ ತೆರಿಗೆ ಪಾವತಿಗೆ ಬಾಕಿ  ಉಳಿಸಿರುವ ಪ್ರಕರಣಕ್ಕೆ  ಸಂಬಂಧಿಸಿ ಹೈಕೋರ್ಟ್‌‌ನ ಎರಡು ನೋಟಿಸ್‌ಗಳನ್ನು ಜಾರಿಗೊಳಿಸುವಲ್ಲಿ ವಿಫಲವಾದ ಸೇವಾ ತೆರಿಗೆ ಇಲಾಖೆಯನ್ನು ಮುಂಬೈ ಹೈಕೋರ್ಟ್‌ ಇಂದು ತರಾಟೆಗೆ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News