×
Ad

ವಿಶ್ವ ಸಾಂಸ್ಕೃತಿಕ ಉತ್ಸವ'ಕ್ಕೆ ಮಳೆ ಅಡ್ಡಿ, ಕೈಕೊಟ್ಟ ವಿದ್ಯುತ್‌ ...

Update: 2016-03-11 17:41 IST

ಹೊಸದಿಲ್ಲಿ, ಮಾ.11 :ದಿಲ್ಲಿಯ ಯಮುನಾ ನದಿ ದಂಡೆಯಲ್ಲಿ ಮೂರು ದಿನಗಳ ಕಾಲ ನಡೆಯುವ 'ವಿಶ್ವ ಸಾಂಸ್ಕೃತಿಕ  ಉತ್ಸವ'ಕ್ಕೆ ಮಳೆ ಅಡ್ಡಿಪಡಿಸಿದೆ.ವಿದ್ಯುತ್‌ ಕೈಕೊಟ್ಟ ಕಾರಣದಿಂದಾಗಿ ಸಭಾಂಗಣದಲ್ಲಿ ಕತ್ತಲು ಆವರಿಸಿದೆ.
ಉತ್ಸವಕ್ಕೆ  ಚಾಲನೆ ದೊರೆಯುವ ಸ್ವಲ್ಪ ಹೊತ್ತಿನ ಮೊದಲು ಭಾರೀ ಮಳೆ ಕಾಣಿಸಿಕೊಂಡಿದೆ.  ಕ್ಷಣಗಣನೆ ಆರಂಭಗೊಂಡಿದ್ದು,  ಉತ್ಸವಕ್ಕೆ ಚಾಲನೆ ನೀಡಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದಾರೆ.
ದಂಡ ಕಟ್ಟಲು ಮೂರು ವಾರಗಳ ಕಾಲಾವಕಾಶ
'ವಿಶ್ವ ಸಾಂಸ್ಕೃತಿಕ ಉತ್ಸವ'ಕ್ಕೆ  ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ)  ವಿಧಿಸಿದ್ದ   5 ಕೋಟಿ ರೂ. ದಂಡವನ್ನು ಆರ್ಟ್‌ ಆಫ್ ಲಿವಿಂಗ್‌ ಫೌಂಡೇಶನ್‌ ಮೂರು ವಾರಗಳ ಒಳಗಾಗಿ ಪಾವತಿಸಲಿದೆ.
  ಇಂದು 25 ಲಕ್ಷ ರೂ  ದಂಡವನ್ನು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಟ್ಟಲಿದ್ದು, ಬಾಕಿ 4.75 ಕೋಟಿ ರೂಪಾಯಿ ದಂಡವನ್ನು  ಮುಂದಿನ ಮೂರು ವಾರಗಳಲ್ಲಿ ಪಾವತಿಸಲು ಅವಕಾಶ ನೀಡುವಂತೆ  'ಆರ್ಟ್‌ ಆಫ್ ಲಿವಿಂಗ್‌ನ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್‌ ಗುರೂಜಿ  ಅವರು ಮಾಡಿದ ಮನವಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಒಪ್ಪಿಗೆ  ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News