×
Ad

ಮಗಳನ್ನು ಮಹಡಿಯ ಕೆಳಗೆ ದೂಡಿ ಹಾಕಿಸಿ, ಮೊದಲ ಪತ್ನಿಗೆ ಮಾರಣಾಂತಿಕ ಹಲ್ಲೆ ಗೈದ ಪತಿ ಪರಾರಿ

Update: 2016-03-11 17:57 IST

ಪಟಿಯಾಲ,ಮಾರ್ಚ್.11: ಅಲಿಪುರ್ ರೋಡ್ ಘುಮ್ಮಣ್ ನಗರ ನಿವಾಸಿ ರೈಲ್ವೆ ಕಾರ್ಮಿಕ ಅವತಾರ್‌ಸಿಂಗ್ ತನ್ನ ಕುಟುಂಬ ಮತ್ತು ಸಂಬಂಧಿಕರ ಮೇಲೆ ಕೆಲವರನ್ನು ಕರೆದುಕೊಂಡು ಬಂದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆವರದಿಯಾಗಿದೆ.

 ತನ್ನ ಮಗಳು ರಮನ್‌ದೀಪ್‌ಕೌರ್(20)ಳನ್ನು ಮೊದಲ ಮಹಡಿಯಿಂದ ದೂಡಿಹಾಕಿದ್ದಲ್ಲದೆ ತನ್ನ ಮನೆಗೆ ಸಪತ್ನೀಕನಾಗಿ ಬಂದಿದ್ದ ಹರಮೀತ್ ಸಿಂಗ್ ಮತ್ತು ಆತನ ಪತ್ನಿ ಮನ್‌ಜೀತ್ ಕೌರ್‌ರೊಂದಿಗೆ ಹೊಡೆದಾಡಿದ್ದಾನೆ. ಅವತಾರ್ ಸಿಂಗ್‌ಗೂ ಅವನ ಪತ್ನಿ ಹರ್‌ಬನ್ಸ್ ಕೌರ್‌ರಿಗೂ ವಿವಾಹ ವಿಚ್ಛೇದನ ಪ್ರಕರಣ ನಡೆಯುತ್ತಿದೆ. ಕಳೆದ ಮಂಗಳವಾರ ಈ ಕೋಪದಲ್ಲಿ ಮನೆಗೆ ನುಗ್ಗಿ ಅವತಾರ್ ಸಿಂಗ್ ಪತ್ನಿ ಹರ್‌ಬನ್ಸ್‌ರಿಗೆ ಹಲ್ಲೆಎಸಗಿದ್ದ. ಹರ್‌ಬನ್ಸ್ ಪೊಲೀಸರಿಗೆ ದೂರು ನೀಡಿದ್ದರು. ಹರ್‌ಬನ್ಸ್‌ರು ಇಂದು ಅವತಾರ್ ಸಿಂಗ್ ಆತನ ಸಂಬಂಧಿಕರುಮತ್ತು ಕೆಲವು ಅಪರಿಚಿತ ವ್ಯಕ್ತಿಗಳೊಂದಿಗೆ ಮನೆಗೆ ನುಗ್ಗಿ ಮಗಳಿಗೆ ಹೊಡೆದು ಮಹಡಿಯಿಂದ ಕೆಳಗೆ ದೂಡಿ ಹಾಕಿದ್ದಾನೆ ಎಂದು ತಿಳಿಸಿದ್ದಾರೆ. ಅನಾಜ್ ಮಂಡಿ ಪೊಲೀಸರಿಗೆ ದೂರು ನೀಡಿದ್ದರೂ ಪತಿ ಅವತಾರ್ ಸಿಂಗ್ ವಿರುದ್ಧ ಯಾವ ಕ್ರಮಕೈಗೊಂಡಿಲ್ಲ ಎಂದು ಹರ್‌ಬನ್ಸ್ ದೂರಿದ್ದಾರೆ. ತಾನು ದೂರು ನೀಡಿದ್ದಂದೆ ಪೊಲೀಸರುಕ್ರಮ ಜರಗಿಸಿದ್ದರೆ ಆತ ಈ ರೀತಿ ಮಾಡಲು ಸಾಧ್ಯವಿರಲಿಲ್ಲ ಎಂದು ಅವರು ಅಲವತ್ತುಕೊಂಡಿದ್ದಾರೆ.

ಗಾಯಾಳುಗಳನ್ನು ಆ್ಯಂಬುಲೆನ್ಸ್‌ನಲ್ಲ ಸರಕಾರಿ ರಾಜೀಂದ್ರ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರು ಮಹಡಿಯಿಂದ ಕೆಳಗೆ ಬಿದ್ದ ಏಟಿಗೆ ಮಗಳ ಎಲುಬು ಉಲುಕಿಕೊಂಡಿದೆ ಎಂದು ಹೇಳಿದ್ದಾರೆ. ಅನಾಜ್ ಮಂಡಿ ಎಎಸ್‌ಐ ಸುರೀಂದ್ರ ಸಿಂಗ್ ಕೂಡಲೇ ಪೀಡಿತರ ದೂರನ್ನು ದಾಖಲಿಸಿಕೊಂಡು ಕ್ರಮ ಜರಗಿಸಲಾಗುವುದೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News