×
Ad

ಭ್ರಷ್ಟಾಚಾರ: 58 ಸರಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿಗಾಗಿ ಕಾಯುತ್ತಿರುವ ಸಿವಿಸಿ

Update: 2016-03-12 22:35 IST

ಹೊಸದಿಲ್ಲಿ,ಮಾ.12: ಕೇಂದ್ರೀಯ ಜಾಗೃತ ಆಯೋಗವು ಕೆಲವು ಐಎಎಸ್ ಮತ್ತು ಐಆರ್‌ಎಸ್‌ಗಳು ಸೇರಿದಂತೆ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿರುವ 58 ಸರಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿವಿಧ ಇಲಾಖೆಗಳಿಂದ ಅನುಮತಿಗಾಗಿ ಕಳೆದ ನಾಲ್ಕು ತಿಂಗಳುಗಳಿಂದಲೂ ಕಾಯುತ್ತಿದೆ.
ನಿಯಮದಂತೆ ನಾಲ್ಕು ತಿಂಗಳುಗಳಲ್ಲಿ ಕಾನೂನು ಕ್ರಮಕ್ಕೆ ಅನುಮತಿಯನ್ನು ನಿಡಬೇಕಾಗಿದೆ.
ಒಟ್ಟೂ 32 ಪ್ರಕರಣಗಳ ಪೈಕಿ ಗರಿಷ್ಠ ಆರು ಪ್ರಕರಣಗಳು ಭ್ರಷ್ಟಾಚಾರ ನಿಗ್ರಹ ಕ್ರಮಗಳಿಗಾಗಿ ನೋಡಲ್ ಏಜನ್ಸಿಯಾಗಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಲ್ಲಿ ಬಾಕಿಯಾಗಿದ್ದರೆ,ರೈಲ್ವೆ,ರಕ್ಷಣೆ,ಕುಟುಂಬ ಕಲ್ಯಾಣ ಮತ್ತು ಉಕ್ಕು ಸಚಿವಾಲಯಗಳಲ್ಲಿ ತಲಾ ಮೂರು ಪ್ರಕರಣಗಳು ಬಾಕಿಯಿವೆ.
 ಬ್ಯಾಂಕ್ ಆಫ್ ಇಂಡಿಯಾ ಮತ್ತು ವಿತ್ತ ಸಚಿವಾಲಯದ ಬಳಿ ತಲಾ ಎರಡು ಪ್ರಕರಣಗಳು ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್,ಕಾರ್ಪೋರೇಷನ್ ಬ್ಯಾಂಕ್,ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಳಾ,ಎಕ್ಸಿಂ ಬ್ಯಾಂಕ್,ಎಸ್‌ಬಿಐ,ಬಿಒಬಿ,ಗೃಹ ,ವಾಣಿಜ್ಯ,ತೈಲ ಮತ್ತು ನೈಸರ್ಗಿಕ ಅನಿಲ ಹಾಗೂ ದೂರಸಂಪರ್ಕ ಸಚಿವಾಲಯಗಳಲ್ಲಿ ತಲಾ ಒಂದು ಪ್ರಕರಣ ಬಾಕಿಯಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News