ಮಾಸ್ಕ್ ಧರಿಸಿ ಅಮಿತಾಭ್ ಬಚ್ಚನ್ ದಿಲ್ಲಿ ರಸ್ತೆಗಳಲ್ಲಿ ಸುತ್ತಾಡಿದಾಗ ಯಾರು ಕಣ್ಣೆತ್ತಿ ಅವರತ್ತ ನೋಡಲಿಲ್ಲ!
ಹೊಸದಿಲ್ಲಿ, ಮಾರ್ಚ್.14: ಅಮಿತಾಭ್ ಬಚ್ಚನ್ ಕೆಲವೊಮ್ಮೆ ಹಾಗಿರುತ್ತಾರೆ. ಸಾಮಾನ್ಯರ ನಡುವೆ ಓಡಾಡಿ ಅವರ ಜೀವನದಲ್ಲಿ ಒಬ್ಬರಾಗಿಬದಲಾಗುವುದು ಅವರ ಆಶೆಗಳಲ್ಲೊಂದು. ಈ ಮೊದಲು ಅವರು ಮುಂಬೈಯ ಜನರ ಜಂಗುಳಿಯ ರೈಲುಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ. ದಿಲ್ಲಿಯಲ್ಲಿ ಜನತುಂಬಿರುವ ನಗರಗಳಲ್ಲಿ ಪಾದಚಾರಿಯಾಗಿ ಸುತ್ತಾಡಿದರು. ಆದರೆ ಅವರ ಅಭಿಮಾನಿಗಳಲ್ಲಿ ಯಾರೂ ಅವರನ್ನು ಗುರುತಿಸಲಿಲ್ಲ.
ಮಾಸ್ಕ್ ಧರಿಸಿ ಯಾರೂ ಜೊತೆಗಿಲ್ಲದೆ ಅಮಿತಾಭ್ ರಸ್ತೆಯುದ್ದಕ್ಕೂ ನಡೆದಾಡಿದರು. ಅಭಿಮಾನಿಗಳ ಗಮನ ಹರಿಯದೆ ಬೀದಿಯ ಸ್ವಾತಂತ್ರ್ಯ ಅನುಭವಿಸಲು ಸಾಧ್ಯವಾದದ್ದಕ್ಕೆ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತೋಷವನ್ನು ಪ್ರಕಟಿಸಿದರು. ವಾಯು ಮಾಲಿನ್ಯದಿಂದಾಗಿ ದಿಲ್ಲಿ ನಿವಾಸಿಗಳು ಮಾಸ್ಕ್ ಧರಿಸುತ್ತಾರೆ. ಇದು ಅವರಿಗೆ ಪ್ರಯೋಜನವಾಯಿತು. ಆಡಂಬರ ವಸ್ತ್ರವಿಧಾನವನ್ನು ತೊರೆದು ಮಾಸ್ಕ್‌ಧರಿಸಿದಾಗ ಬಚ್ಚನ್ ಸಾಮಾನ್ಯ ವ್ಯಕ್ತಿಯಾಗಿದ್ದರು. ರಸ್ತೆಯಲ್ಲಿ ಅಲೆದಾಡುತ್ತಿರುವ ಬಚ್ಚನ್‌ರ ಫೋಟೊಗಳೂ ಸೋಶಿಯಲ್ ಮೀಡಿಯಾದಲ್ಲಿ ಹಿಟ್‌ಆಗಿವೆ.
ಶೂಜಿತ್ ಸರ್ಕಾರ್ ನಿರ್ಮಿಸುವ ಸಿನೆಮಾದ ಶೂಟಿಂಗ್‌ಗಾಗಿಮಾರ್ಚ್ ಆರರಿಂದ ಬಚ್ಚನ್ ದಿಲ್ಲಿಯಲ್ಲಿದ್ದಾರೆ. ಹೀಗೆ ಅವರು ನಗರಕ್ಕೆ ಒಂದು ಪ್ರದಕ್ಷಿಣೆ ಹಾಕಿದರು. ಖಾಕಿ ಪ್ಯಾಂಟ್ ಜಕೇಟ್ ಮುಖಕ್ಕೊಂದು ಮಾಸ್ಕ್ ಇಟ್ಟು ಅವರು ಬೀದಿಗಿಳಿದಿದ್ದರು.
ಹ್ಹಹ್ಹಹ್ಹ.....ಹೀಗೆ ಅವರ ದೀರ್ಘ ನಗುವಿನೊಂದಿಗೆ ಅವರ ಬ್ಲಾಗ್ ಬರಹ ಆರಂಭವಾಗುತ್ತಿದೆ. ಜನನಿಬಿಡ ದಿಲ್ಲಿ ರಸ್ತೆಗಳಲ್ಲಿ ನಡೆದರೂ ಯಾರೂ ಕಣ್ಣೆತ್ತಿ ನೋಡಲಿಲ್ಲ. ಗುರುತು ಹಿಡಿಯದ್ದಕ್ಕಾಗಿ ಅಮಿತಾಬ್ ಬಚ್ಚನ್ ತಮಾಶೆಯ ಕಮೆಂಟು ಹಾಕಿದ್ದಾರೆ.