ಬಂಟ್ವಾಳ: ಕರೆಂಟ್ ಶಾಕ್ ನಿಂದ ಯುವಕ ಸಾವು

Update: 2016-03-14 18:13 GMT

ಬಂಟ್ವಾಳ: ವಿದ್ಯುತ್ ಶಾಕ್ ನಿಂದ ಯುವಕನೋರ್ವ ಮ್ರತಪಟ್ಟ ಘಟನೆ ಸೋಮವಾರ ರಾತ್ರಿ 10:30 ವೇಳೆಗೆ ತಾಲೂಕಿನ ಎಡ್ತೂರು ಪದವು ಸಮೀಪದ ಅಜ್ಜಿಬೆಟ್ಟು ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ದಿ. ಜಾರ್ಜ್ ರೋಡ್ರಿಗಸ್ ಎಂಬವರ ಮಗ ನೆಲ್ಸನ್ ರೋಡ್ರಿಗಸ್ (26) ಮ್ರತ ಯುವಕ. ಈತ ಸ್ಪರ್ಶಿಸಿದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆಯಾದರೂ ಸ್ಪಷ್ಟ ಮಾಹಿತಿ ದೊರೆತಿಲ್ಲ.

ಮೃತರಿಗೆ ತಾಯಿ, ಮೂವರು ಸಹೋದರು ಇದ್ದಾರೆ. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮ್ರತ ದೇಹವನ್ನು ಸಾಗಿಸಲಾಗಿದೆ. ಈ ಬಗ್ಗೆ  ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News