ಹೃತಿಕ್ , ಕಂಗನಾ ಪರಸ್ಪರ ನೋಟೀಸ್ ವಾರ್
ಮುಂಬೈ , ಮಾ. 15 : ಹೃತಿಕ್ ರೋಶನ್ ಹಾಗು ಕಂಗನಾ ರಣಾವತ್ ನಡುವಿನ ವಾಗ್ದಾಳಿ ಈಗ ಪರಸ್ಪರ ನೋಟೀಸ್ ಕಳಿಸುವಲ್ಲಿಗೆ ಬಂದು ತಲುಪಿದೆ. ಹೃತಿಕ್ ಹಾಗು ನನ್ನ ನಡುವೆ ಏನೋ ಇತ್ತು ಎಂಬಂತೆ ಒಮ್ಮೆ ಕಂಗನಾ ಮಾತನಾಡಿದ್ದರು. ಅದು ಹೃತಿಕ್ ರನ್ನು ಕೆರಳಿಸಿತ್ತು. ಆದರೆ ಅದಕ್ಕೆ ಕಂಗನಾ ಕ್ಯಾರೇ ಅನ್ನಲಿಲ್ಲ. ಈಗ ಹೃತಿಕ್ ವಕೀಲ ದೀಪೇಶ್ ಮೆಹತ ಮೂಲಕ ಕಂಗನಾಗೆ ಮಾನನಷ್ಟದ ನೋಟಿಸ್ ಕಳಿಸಿದ್ದಾರೆ. ಕಂಗನಾ ಪತ್ರಿಕಾ ಗೊಷ್ಟಿಯೊಂದರಲ್ಲಿ ತಮ್ಮ ನಡುವಿನ ಈ ಹಿಂದಿನ ಸಂಬಂಧದ ಕುರಿತು ಮಾತನಾಡಲಿದ್ದಾರೆ ಎಂಬ ಸುಳಿವು ಸಿಕ್ಕಿರುವುದೇ ಹೃತಿಕ್ ಈ ನಡೆಗೆ ಕಾರಣ ಎಂದು ಹೇಳಲಾಗಿದೆ. ತಕ್ಷಣ ಪತ್ರಿಕಾ ಗೋಷ್ಠಿ ಮಾಡಿ ಕ್ಷಮೆ ಕೇಳಬೇಕು , ಇಲ್ಲದಿದ್ದರೆ ನಮ್ಮಿಬ್ಬರ ನಡುವಿನ ಎಲ್ಲ ಮಾತುಕತೆಗಳನ್ನು ಬಹಿರಂಗಪಡಿಸುವುದಾಗಿ ಹೃತಿಕ್ ಹೇಳಿದ್ದಾರೆ.
ಇದಕ್ಕೆ ಬಗ್ಗದ ಕಂಗನಾ ತನ್ನ ವಕೀಲ ರಿಝ್ವಾನ್ ಸಿದ್ದೀಕಿ ಮೂಲಕ ಹೃತಿಕ್ ಗೆ ನೋಟಿಸ್ ಕಳಿಸಿದ್ದಾರೆ. ಇದರಲ್ಲಿ ಹೃತಿಕ್ ತಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ಕಂಗನಾ ದೂರಿದ್ದಾರೆ.