ರಿಯಲ್ ಸ್ಟಾರ್ ಹನನ್ - ಸೂಪರ್ ಸ್ಟಾರ್ ಅಕ್ಷಯ್ ಭೇಟಿ

Update: 2016-03-16 12:51 GMT

ಮುಂಬೈ, ಮಾ 16 : ಇತ್ತೀಚಿಗೆ ದುಬೈ ಯಲ್ಲಿ ನಡೆದ ದಿ ಗ್ಲೋಬಲ್ ಟೀಚರ್ ಪ್ರೈಝ್ ಸಮಾರಂಭದಲ್ಲಿ ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್, ಪರಿಣಿತಿ ಚೋಪ್ರ , ಅಭಿಷೇಕ್ ಬಚ್ಚನ್ ಮತ್ತಿತರರು ಹಾಲಿವುಡ್ ತಾರೆಗಳಾದ ಸಲ್ಮಾ ಹಾಯೆಕ್ ಮತ್ತಿತರರೊಂದಿಗೆ ಭಾಗವಹಿಸಿದ್ದರು. 

ಆದರೆ ವಿಶೇಷವೆಂದರೆ , ನಮ್ಮ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮಾತ್ರ ಸ್ಟಾರ್ ಗಳೊಂದಿಗೆಬೆರೆಯುವುದದಕ್ಕಿಂತಲೂ ಹೆಚ್ಚು ಆಸಕ್ತಿಯಿಂದ ರಿಯಲ್ ಸ್ಟಾರ್ ಫೆಲೆಸ್ತೀನ್ ನ ಶಿಕ್ಷಕಿ ಹನನ್ ಅಲ್  ರೂಬ್ ಅವರನ್ನು ಭೇಟಿಯಾಗಿ ಮಾತನಾಡಿದರು. ನಿರಾಶ್ರಿತರ ಶಿಬಿರದಲ್ಲಿ ಬೆಳೆದ  ಹನನ್ ಆ ಕಾರ್ಯಕ್ರಮದಲ್ಲಿ ಜಗತ್ತಿನ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾಗಿ ಒಂದು ಮಿಲಿಯನ್ ಡಾಲರ್ ಬಹುಮಾನ ಪಡೆದಿದ್ದರು. ಆಕೆ ವಿಜೇತೆ ಎಂದು ವೀಡಿಯೊ ಸಂದೇಶದ ಮೂಲಕ ಘೋಷಿಸಿದ್ದು ಪೋಪ್ ಫ್ರಾನ್ಸಿಸ್. 

" ಅಕ್ಷಯ್ ವಿಶೇಷ ಮುತುವರ್ಜಿ ವಹಿಸಿ ಹನನ್ ಎಲ್ಲಿ ಕುಳಿತಿದ್ದಾರೆಂದು ಕಂಡು ಹಿಡಿದು ಕಾರ್ಯಕ್ರಮ ಮುಗಿದ ಕೂಡಲೇ ಹೋಗಿ ಆಕೆಯನ್ನು ಭೇಟಿಯಾದರು. ನಿಸ್ವಾರ್ಥವಾಗಿ ಜನರಿಗೆ ಜ್ಞಾನ ಹಂಚಿದ ಇಂತಹ ಶ್ರೇಷ್ಠ ಶಿಕ್ಷಕಿಯನ್ನು ಭೇಟಿಯಾಗಿದ್ದು ನನಗೆ ತೀವ್ರ ಸಂತಸವಾಗಿದೆ. ಆಕೆಯ ನಿಸ್ವಾರ್ಥತೆ , ಹೃದಯ ವೈಶಾಲ್ಯ ಗುಣಗಳು ನನ್ನಲ್ಲೂ ಬರಲಿ ಎಂದು ಬಯಸುತ್ತೇನೆ  " ಎಂದು ಅವರು ಹನನ್ ಅವರಿಗೆ ಹೇಳಿದರು ಎಂದು ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News