ಈ ಪ್ರೊಫೆಸರ್‌ರ ಒಂದು ಉತ್ತರದ ಮೌಲ್ಯ 4.7 ಕೋಟಿ ರೂಪಾಯಿ!

Update: 2016-03-17 04:04 GMT

ಶತಮಾನಗಳ ಕಾಲ ಗಣಿತಜ್ಞರ ತಲೆ ತಿಂದ ವಿಷಯವದು. ಆದರೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಈಗ 300 ವರ್ಷ ಹಳೇ ರಹಸ್ಯವನ್ನು ಬಯಲಿಗೆಳೆದಿದ್ದಾರೆ.

ಫರ್ಮಟ್ ಲಾಸ್ಟ್ ಥಿಯರಮ್ ಅನ್ನು ಫ್ರೆಂಚ್ ಗಣಿತಜ್ಞ ಪೀರ್ ಡೆ ಫರ್ಮಟ್ 1637ರಲ್ಲಿ ಬರೆದಿದ್ದರು. ಅದನ್ನು ಬಿಡಿಸಿದ ಆಂಡ್ರ್ಯೂ ವಿಲ್ಸ್ ಈಗ 2016ರ ಆಬಲ್ ಪ್ರೈಸ್ ಪಡೆದಿದ್ದಾರೆ. ಈ ಬಹುಮಾನದ ಮೊತ್ತ 5 ಲಕ್ಷ ಪೌಂಡ್ ಅಂದರೆ 4.7 ಕೋಟಿ ರೂಪಾಯಿ!


ಆಕ್ಸಫರ್ಡ್‌ನ ಗಣಿತ ಸಂಶೋಧಕ ಪ್ರೊಫೆಸರ್ ಆಗಿರುವ ಆಂಡ್ರೂ ಈಗ ಫರ್ಮಂಟ್ ಸಿದ್ಧಾಂತವನ್ನು ಬಿಡಿಸಿ ಸಂಖ್ಯಾ ಸಿದ್ಧಾಂತಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ನಾರ್ವೆಯ ರಾಜ ಮೇನಲ್ಲಿ ನಡೆಯುವ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಕೊಡಲಿದ್ದಾರೆ. ಆಬಲ್ ಪ್ರಶಸ್ತಿ ಪಡೆಯುತ್ತಿರುವುದು ಮತ್ತು ಸಾಧನೆ ಮಾಡಿ ಹಿಂದೆ ಈ ಪ್ರಶಸ್ತಿ ಪಡೆದವರ ಸಾಲಿನಲ್ಲಿ ನಿಲ್ಲುವುದು ಬಹಳ ಹೆಮ್ಮೆ ಎನಿಸುತ್ತಿದೆ.

ಚಿಕ್ಕ ವಯಸ್ಸಿನಿಂದಲೇ ಫರ್ಮಟ್ ಸಮೀಕರಣ ನನ್ನ ಹುಚ್ಚಾಗಿತ್ತು ಮತ್ತು ಅದನ್ನು ಬಿಡಿಸಿರುವುದು ಏನೋ ಪೂರ್ಣತೆಯ ಅನುಭವ ಕೊಟ್ಟಿದೆ ಎಂದು ಆಂಡ್ರ್ಯೂ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News