×
Ad

ಭಾರತೀಯ ನೌಕಾಪಡೆಯಲ್ಲಿ ಶಾರ್ಟ್ ಸರ್ವಿಸ್ ಕಮಿಷನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Update: 2026-01-25 12:17 IST

Photo Credit ; joinindiannavy.gov.in

ಭಾರತೀಯ ನೌಕಾಪಡೆಯಲ್ಲಿ 2027ರ ಶಾರ್ಟ್ ಸರ್ವಿಸ್ ಕಮಿಷನರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 260 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.

ಭಾರತೀಯ ನೌಕಾಪಡೆಗೆ ಸೇರಿ (ನೌಸೇನಾ ಭಾರತಿ), ಜನವರಿ 2027ರ ಶಾರ್ಟ್ ಸರ್ವಿಸ್ ಕಮಿಷನರ್ (ಎಸ್ಎಸ್ಸಿ) ಅಧಿಕಾರಿ ನೇಮಕಾತಿಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ 260 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಭಾರತೀಯ ನೌಕಾಪಡೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ 2026 ಜನವರಿ 24ರಿಂದ ಪ್ರಾರಂಭವಾಗಿದ್ದು, ಅಭ್ಯರ್ಥಿಗಳು 2026 ಫೆಬ್ರವರಿ 24ರವರೆಗೆ ಅರ್ಜಿ ಸಲ್ಲಿಸಬಹುದು. ಅಧಿಸೂಚನೆಯಲ್ಲಿ ಇರುವ ಹೆಚ್ಚಿನ ವಿವರಗಳನ್ನು ಪರಿಶೀಲಿಸಲು ನೌಕಾಪಡೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

2002 ಜುಲೈ 02ರಿಂದ 2008 ಜುಲೈ 01ರ ನಡುವೆ ಜನಿಸಿದ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ SSC ಅಧಿಕಾರಿ ನೇಮಕಾತಿ 2027ಕ್ಕೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಬಳಸಬಹುದು:

https://www.joinindiannavy.gov.in/en/account/account/state

►ಪ್ರಮುಖ ದಿನಾಂಕಗಳು

* ಆನ್‌ಲೈನ್ ಅರ್ಜಿ ಆರಂಭ: 24 ಜನವರಿ 2026

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಫೆಬ್ರವರಿ 2026

* ಶುಲ್ಕ ಪಾವತಿಗೆ ಕೊನೆಯ ದಿನಾಂಕ: 24 ಫೆಬ್ರವರಿ 2026

* ಪರೀಕ್ಷೆ ದಿನಾಂಕ: ಶೀಘ್ರವೇ ಅಪ್‌ಡೇಟ್ ಮಾಡಲಾಗುವುದು

* ಪ್ರವೇಶ ಪತ್ರ (ಹಾಲ್ ಟಿಕೆಟ್): ಪರೀಕ್ಷೆಗೆ ಮೊದಲು

* ಫಲಿತಾಂಶ ದಿನಾಂಕ: ಶೀಘ್ರವೇ ಅಪ್‌ಡೇಟ್ ಮಾಡಲಾಗುವುದು

ವಿವರಗಳಿಗೆ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ ದೃಢಪಡಿಸಬಹುದು:

https://www.joinindiannavy.gov.in/en/event/online-application-window-for-ssc-various-entries-jan-27-course-will-be-live-from-24-jan-24-feb-26.html

►ಅರ್ಜಿ ಶುಲ್ಕ

ಯಾವುದೇ ಅಭ್ಯರ್ಥಿಗೆ ಅರ್ಜಿ ಶುಲ್ಕ ಇರುವುದಿಲ್ಲ.

►ವಯೋಮಿತಿ

2002 ಜುಲೈ 02ರಿಂದ 2008 ಜುಲೈ 01ರ ನಡುವೆ ಜನಿಸಿದ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ SSC ಅಧಿಕಾರಿ ನೇಮಕಾತಿ 2027ಕ್ಕೆ ಅರ್ಜಿ ಸಲ್ಲಿಸಬಹುದು. ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ಭಾರತೀಯ ನೌಕಾಪಡೆ ನೀಡುತ್ತದೆ.

►ಒಟ್ಟು ಹುದ್ದೆಗಳು

260 ಹುದ್ದೆಗಳು

►ಹುದ್ದೆಗಳ ವಿವರ

ಅಧಿಕಾರಿ ವಿಭಾಗದ ಹುದ್ದೆಗಳು

• ಎಸ್ಎಸ್ಸಿ ಜನರಲ್ ಸರ್ವಿಸ್ (ಜಿಎಸ್/ಎಕ್ಸ್) – 76

• ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) – 18

• ನೇವಲ್ ಏರ್ ಆಪರೇಶನ್ಸ್ ಅಧಿಕಾರಿ (ಎನ್ಎಒಒ) – 20

• ಎಸ್ಎಸ್ಸಿ ಪೈಲಟ್ – 25

• ಎಸ್ಎಸ್ಸಿ ಲಾಜಿಸ್ಟಿಕ್ಸ್ – 10

►ತಾಂತ್ರಿಕ ವಿಭಾಗದ ಹುದ್ದೆಗಳು

• ಎಂಜಿನಿಯರಿಂಗ್ ಬ್ರಾಂಚ್ ಜನರಲ್ ಸರ್ವಿಸ್ – 42

• ಎಲೆಕ್ಟ್ರಿಕಲ್ ಬ್ರಾಂಚ್ ಜನರಲ್ ಸರ್ವಿಸ್ – 38

• ಸಬ್ಮೆರೀನ್ ಟೆಕ್ ಎಂಜಿನಿಯರಿಂಗ್ – 08

• ಸಬ್ಮೆರೀನ್ ಟೆಕ್ ಎಲೆಕ್ಟ್ರಿಕಲ್ – 08

►ಶಿಕ್ಷಣ ವಿಭಾಗದ ಹುದ್ದೆಗಳು

• ಶಿಕ್ಷಣ – 15

►ವಿದ್ಯಾರ್ಹತೆ

ಅಧಿಕಾರಿ ವಿಭಾಗದ ಹುದ್ದೆಗಳು

• ಎಸ್ಎಸ್ಸಿ ಜನರಲ್ ಸರ್ವಿಸ್ (ಜಿಎಸ್/ಎಕ್ಸ್):

ಬಿಇ / ಬಿ.ಟೆಕ್ (ಶೇ. 60 ಅಂಕಗಳು)

• ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ):

ಬಿ.ಟೆಕ್ (ಶೇ. 60 ಅಂಕಗಳು)

10ನೇ ಮತ್ತು 12ನೇ ತರಗತಿಗಳಲ್ಲೂ ಶೇ. 60 ಅಂಕಗಳು ಅಗತ್ಯ

• ನೇವಲ್ ಏರ್ ಆಪರೇಶನ್ಸ್ ಅಧಿಕಾರಿ (ಎನ್ಎಒಒ):

ಬಿಇ / ಬಿ.ಟೆಕ್ (ಶೇ. 60 ಅಂಕಗಳು)

10ನೇ ಮತ್ತು 12ನೇ ತರಗತಿಗಳಲ್ಲೂ ಶೇ. 60 ಅಂಕಗಳು ಅಗತ್ಯ

• ಎಸ್ಎಸ್ಸಿ ಪೈಲಟ್:

ಬಿಇ / ಬಿ.ಟೆಕ್ (ಶೇ. 60 ಅಂಕಗಳು)

• ಎಸ್ಎಸ್ಸಿ ಲಾಜಿಸ್ಟಿಕ್ಸ್:

ಬಿಇ / ಬಿ.ಟೆಕ್ ಅಥವಾ ಎಂಬಿಎ / ಎಂಸಿಎ / ಎಂಎಸ್ಸಿ (ಐಟಿ) ಅಥವಾ

ಬಿಎಸ್ಸಿ / ಬಿಕಾಂ / ಬಿಎಸ್ಸಿ (ಐಟಿ) ಜೊತೆಗೆ ಫೈನಾನ್ಸ್ ಪಿಜಿ ಡಿಪ್ಲೊಮಾ (ಶೇ. 60 ಅಂಕಗಳು)

►ತಾಂತ್ರಿಕ ವಿಭಾಗದ ಹುದ್ದೆಗಳು

• ಎಂಜಿನಿಯರಿಂಗ್ ಬ್ರಾಂಚ್ ಜನರಲ್ ಸರ್ವಿಸ್:

ಬಿಇ / ಬಿ.ಟೆಕ್ (ಶೇ. 60 ಅಂಕಗಳು) –

ಮೆಕಾನಿಕಲ್ / ಮೆರೈನ್ / ಇನ್ಸ್ಟ್ರುಮೆಂಟೇಶನ್ / ಪ್ರೊಡಕ್ಷನ್ / ಏರೋನಾಟಿಕಲ್ /

ಇಂಡಸ್ಟ್ರಿಯಲ್ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್ / ಕಂಟ್ರೋಲ್ ಎಂಜಿನಿಯರಿಂಗ್ /

ಏರೋಸ್ಪೇಸ್ / ಆಟೋಮೊಬೈಲ್ಸ್ / ಮೆಟಲರ್ಜಿ / ಮೆಕಾಟ್ರೋನಿಕ್ಸ್ /

ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್

• ಸಬ್ಮೆರೀನ್ ಟೆಕ್ ಎಂಜಿನಿಯರಿಂಗ್:

ಪ್ರೊಡಕ್ಷನ್, ಕಂಟ್ರೋಲ್, ಏರೋನಾಟಿಕಲ್, ಇಂಡಸ್ಟ್ರಿಯಲ್,

ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್, ಮೆಕಾನಿಕಲ್ ಅಥವಾ

ಮೆಕಾನಿಕಲ್ ವಿತ್ ಆಟೊಮೇಷನ್ ಎಂಜಿನಿಯರಿಂಗ್‌ನಲ್ಲಿ

ಬಿಇ / ಬಿ.ಟೆಕ್ (ಶೇ. 60 ಅಂಕಗಳು)

• ಎಲೆಕ್ಟ್ರಿಕಲ್ ಬ್ರಾಂಚ್ ಜನರಲ್ ಸರ್ವಿಸ್:

ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ /

ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ / ಟೆಲಿಕಮ್ಯುನಿಕೇಷನ್ /

ಇನ್ಸ್ಟ್ರುಮೆಂಟೇಶನ್ / ಪವರ್ ಎಂಜಿನಿಯರಿಂಗ್ / ಪವರ್ ಎಲೆಕ್ಟ್ರಾನಿಕ್ಸ್

ವಿಷಯಗಳಲ್ಲಿ ಬಿಇ / ಬಿ.ಟೆಕ್ (ಶೇ. 60 ಅಂಕಗಳು)

• ಸಬ್ಮೆರೀನ್ ಟೆಕ್ ಎಲೆಕ್ಟ್ರಿಕಲ್:

ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ /

ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್ / ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್ /

ಅಪ್ಲೈಡ್ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್

ವಿಷಯಗಳಲ್ಲಿ ಬಿಇ / ಬಿ.ಟೆಕ್ (ಶೇ. 60 ಅಂಕಗಳು)

►ಶಿಕ್ಷಣ ವಿಭಾಗ

• ಶಿಕ್ಷಣ:

* ಬಿಎಸ್ಸಿಯಲ್ಲಿ ಭೌತಶಾಸ್ತ್ರದೊಂದಿಗೆ ಎಂಎಸ್ಸಿ (ಗಣಿತ / ಕಾರ್ಯಾಚರಣಾ ಸಂಶೋಧನೆ)

ಅಥವಾ

* ಬಿಎಸ್ಸಿಯಲ್ಲಿ ಗಣಿತದೊಂದಿಗೆ ಎಂಎಸ್ಸಿ (ಭೌತಶಾಸ್ತ್ರ / ಅನ್ವಯಿಕ ಭೌತಶಾಸ್ತ್ರ)

ಅಥವಾ

* ಬಿಎಸ್ಸಿಯಲ್ಲಿ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದೊಂದಿಗೆ ಎಂಎಸ್ಸಿ

(ಎಲ್ಲಕ್ಕೂ ಶೇ. 60 ಅಂಕಗಳು ಅಗತ್ಯ)

ಅಥವಾ

ಮೆಕಾನಿಕಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ ವಿಭಾಗಗಳಲ್ಲಿ

ಬಿಇ / ಬಿ.ಟೆಕ್ ಅಥವಾ ಎಂ.ಟೆಕ್ (ಶೇ. 60 ಅಂಕಗಳು) –

ಥರ್ಮಲ್ / ಪ್ರೊಡಕ್ಷನ್ / ಮೆಷಿನ್ ಡಿಸೈನ್ /

ಪವರ್ ಸಿಸ್ಟಮ್ / ವಿಎಲ್ಎಸ್ಐ / ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News