×
Ad

ಹೇಮಮಾಲಿನಿ ನೃತ್ಯ ಅಕಾಡಮಿಗೆ ಜಮೀನು ಅಕ್ರಮ ವಿಧಾನದಿಂದ ಹಂಚಿಕೆಯಾಗಿಲ್ಲ: ಮಹಾರಾಷ್ಟ್ರ ಸರಕಾರ

Update: 2016-03-18 16:35 IST

ಮುಂಬೈ, ಮಾರ್ಚ್.18: ಮಹಾರಾಷ್ಟ್ರ ಸರಕಾರ ಬಿಜೆಪಿ ಸಂಸದೆ ಹೇಮಮಾಲಿನಿಯ ನೃತ್ಯ ಅಕಾಡಮಿಗೆ ಅಂಧೇರಿ ಉಪನಗರದಲ್ಲಿ ನೀಡಿದ್ದ ಜಮೀನು ಭೂ ಹಂಚಿಕೆ ನಿಯಮಗಳನ್ನು ಪಾಲಿಸಲಾಗಿದೆಯೆಂದು ಮಹಾರಾಷ್ಟ್ರದ ಸಚಿವ ಏಕನಾಥ ಖಾಡ್ಸೆ ಹೇಳಿದ್ದಾರೆ. ಈ ಭೂಮಿಯನ್ನು ಮಾರಿಲ್ಲ ಬದಲಾಗಿ ಗುತ್ತಿಗೆ ನೀಡಲಾಗಿದೆ ಎಂದ ಅವರು ಸ್ಪಷ್ಟಪಡಿಸಿದ್ದಾರೆ. ಹೇಮಮಾಲಿನಿ ಭೂಹಂಚಿಕೆಯಲ್ಲಿ ಯಾವುದೆ ತಪ್ಪುಗಳಿಲ್ಲ ಒಂದು ವೇಳೆ ಅವರಿಂದ ಈ ಜಮೀನನ್ನು ವಾಪಸು ಪಡೆಯುವುದಾದರೆ ಮಾಜಿ ಸಚಿವರಿಗೆ ಕ್ಲಬ್ ಆಸ್ಪತ್ರೆ, ಶಿಕ್ಷಣಕ್ಕೆ ಸಂಬಂಧಿಸಿದವರಿಗೆ ನೀಡಿದ ಭೂಮಿಗಳನ್ನು ಕೂಡಾ ವಾಪಸು ಪಡೆಯಬೇಕಾಗಬಹುದೆಂದು ಕಂದಾಯ ಸಚಿವ ಖಾಡ್ಸೆ ಹೇಳಿದ್ದಾರೆ. ಸರಕಾರಿ ಭೂಮಿಯಲ್ಲಿ ನಿರ್ಮಾಣವಾಗಿರುವ ಯಾವುದಾದರೂ ಆಸ್ಪತ್ರೆ ಬಡವರ ಚಿಕಿತ್ಸೆಗೆ ನಿರಾಕರಿಸಿದರೆ ಆ ಜಮೀನನ್ನು ವಾಪಸು ಪಡೆಯಲಾಗುವುದು. ತನಗೆ ಭೂಮಿ ಪಡೆಯಲಿಕ್ಕಾಗಿ ಇಪ್ಪತ್ತು ವರ್ಷಗಳ ವರೆಗೆ ಹೋರಾಡಬೇಕಾಗಿ ಬಂದಿದೆ ಎಂದು ಹೇಮಾಮಾಲಿನಿ ತಿಳಿಸಿದ್ದಾರೆ. ನೃತ್ಯ ಶಾಲೆಯಲ್ಲದೆ ಉಳಿದ ಜಮೀನಿನಲ್ಲಿ ಅವರು ಉದ್ಯಾನವನ್ನು ಕೂಡಾ ಅಭಿವೃದ್ಧಿ ಪಡಿಸಬೇಕಾಗಿದೆ.

ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಈ ಪ್ರಕರಣವನ್ನು ಬಹಿರಂಗಕ್ಕೆತಂದು ಆ ಜಮೀನು ಹಂಚಿಕೆಯನ್ನು ರದ್ದುಗೊಳಿಸಬೇಕೆಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರಲ್ಲಿ ವಿನಂತಿಸಿದ್ದರು. ಗಲಗಲಿ ಅವರು ಪ್ರಮುಖಸ್ಥಳದಲ್ಲಿ ಹೇಮಾರಿಗೆ ಕೇವಲ 70ಸಾವಿರ ರೂಪಾಯಿಗೆ ಸರಕಾರ ಜಮೀನು ನೀಡಿದೆ ಎಂದು ಅವರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News