×
Ad

ಭ್ರಷ್ಟರ ಮೇಲೆ ನಿಗಾ ಇಡಲು ಕೇಜ್ರಿ ಸರಕಾರದಿಂದ ಹೊಸ ಪಡೆ

Update: 2016-03-18 16:53 IST

ನವದೆಹಲಿ : ಭ್ರಷ್ಟಾಚಾರದ ವಿರುದ್ಧ ಕಣ್ಗಾವಲನ್ನು ತೀವ್ರಗೊಳಿಸಿರುವ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರಕಾರ ದೆಹಲಿ ಆಡಳಿತದಡಿಯಲ್ಲಿ ಕಾರ್ಯನಿರ್ವಹಿಸುವಕಚೇರಿಗಳಲ್ಲಿ ಭ್ರಷ್ಟಾಚಾರ ನಿಯಂತ್ರಿಸುವ ಸಲುವಾಗಿ ಅಧಿಕಾರಿಗಳ ಪಡೆಯೊಂದನ್ನು ರಚಿಸಿದ್ದು ಈ ತಂಡ ನೇರವಾಗಿ ಮುಖ್ಯಮಂತ್ರಿಗಳ ನಿಯಂತ್ರಣದಡಿಯಲ್ಲಿ ಬರಲಿದೆ.

ಕಳೆದ ಕೆಲವು ವಾರಗಳಿಂದ ಸಕ್ರಿಯವಾಗಿರುವ ಈ ತಂಡ ಗುರುವಾರದಂದು ಎರಡು ಭ್ರಷ್ಟಾಚಾರ ಪ್ರಕರಣಗಳನ್ನು ಸರಕಾರದ ಗಮನಕ್ಕೆ ತಂದಿದ್ದು ಇದರ ಫಲವಾಗಿ ಶೇಖ್ ಸರಾಯ್‌ನಲ್ಲಿರುವ ಮೊಟಾರ್ ಲೈಸನ್ಸ್ ಅಧಿಕಾರಿಯೊಬ್ಬರು ಹಾಗೂ ಕಪಶೇರಾದ ಸಬ್-ಡಿವಿಷನಲ್ ಮ್ಯಾಜಿಸ್ಟ್ರೇಟ್ ಒಬ್ಬರನ್ನು ಹುದ್ದೆಯಿಂದ ವಜಾಗೊಳಿಸಲಾಯಿತೆಂದು ಸರಕಾರಿ ಮೂಲಗಳು ತಿಳಿಸಿವೆ.ಮೋಟಾರ್ ಲೈಸನ್ಸ್ ಅಧಿಕಾರಿ ತನ್ನ ಕಿರಿಯ ಅಧಿಕಾರಿಗಳ ಮೂಲಕ ಲಂಚಪಡೆಯುತ್ತಿದ್ದರೆಂದು ತಿಳಿದು ಬಂದಿದ್ದರೆ, ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ವಕೀಲರ ಹಾಗೂ ದಾಖಲೆ ಬರಹಗಾರರ ಮುಖಾಂತರ ಲಂಚ ಪಡೆಯುತ್ತಿದ್ದರೆಂದು ಆರೋಪಿಸಲಾಗಿದೆ.

ಸರಕಾರ ರಚಿಸಿರುವ ಹೊಸ ತಂಡದಲ್ಲಿ ಎಷ್ಟು ಸದಸ್ಯರಿದ್ದಾರೆ ಹಾಗೂ ಅವರ್ಯಾರು ಎಂಬ ಬಗ್ಗೆ ಮಾಹಿತಿಯಿಲ್ಲದಿದ್ದರೂ ಈ ತಂಡ ಸರಕಾರದ ಕಣ್ಣಾಗಿ ಸರಕಾರಿ ಕಚೇರಿಗಳ ಮೇಲೆ ನಿಗಾ ಇಡಲಿದೆ. ತಂಡ ಸರಕಾರಿ ಆಸ್ಪತ್ರೆಗಳ ಮೇಲೂ ನಿಗಾ ನಿಟ್ಟಿದ್ದರೂ ಇಲ್ಲಿಯವರೆಗೆ ಅಲ್ಲಿ ಯಾವುದೇ ಭ್ರಷ್ಟಾಚಾರ ಪ್ರಕರಣ ಪತ್ತೆಯಾಗಿಲ್ಲವೆಂದು ಮೂಲಗಳು ತಿಳಿಸಿವೆ.

ಭ್ರಷ್ಟಾಚಾರ ನಿಗ್ರಹ ತನ್ನ ಮುಖ್ಯ ಗುರಿಯೆಂದು ಫೆಬ್ರವರಿ 2015ರ ಚುನಾವಣೆಯ ವೇಳೆ ಎಎಪಿ ಪ್ರತಿಪಾದಿಸಿದ್ದರೆ, ಅಧಿಕಾರಕ್ಕೆ ಬಂದ ಮೇಲೆ ತನ್ನ ಕಾರ್ಯ ಕ್ಕೆ ತೊಡಕುಂಟಾಗಲು ಭ್ರಷ್ಟಾಚಾರ ವಿರೋಧಿ ಘಟಕವುಕೇಂದ್ರದ ಹಿಡಿತದಲ್ಲಿರುವುದೇ ಕಾರಣ ಎಂದು ದೂರಿತ್ತು.

ಈ ಹೊಸ ತಂಡವು ಸರಕಾರ ಸ್ಥಾಪಿಸಿರುವ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಗೆ ಸಹಕಾರಿಯಾಗಲಿದೆ.ಭ್ರಷ್ಟಾಚಾರ ವಿರೋಧಿ ಘಟಕವುದೂರುಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಿದ್ದರೆ,ಭ್ರಷ್ಟಾಚಾರ ನಿಗ್ರಹ ತಂಡ ಸರಕಾರಕ್ಕೆ ಅಗತ್ಯ ಮಾಹಿತಿ ನೀಡಿಸೂಕ್ತ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News