ಛತ್ತೀಸ್‌ಗಡದ ಸುಕಮಾದಲ್ಲಿ ಬಾಂಬು ಸ್ಫೋಟ: ಬಾಲಕಿ ಮೃತ್ಯು
Update: 2016-03-18 19:07 IST
ಹೊಸದಿಲ್ಲಿ, ಮಾರ್ಚ್.18: ಛತ್ತೀಸ್‌ಗಡ ರಾಜ್ಯದ ಸುಕಮಾ ಎಂಬಲ್ಲಿ ಬಾಂಬ್ ಸ್ಫೋಟವೊಂದು ನಡೆದಿದ್ದು ಎಂಟು ವರ್ಷದ ಬಾಲಕಿ ಮೃತಳಾಗಿದ್ದಾಳೆ. ಪೊಲೀಸ್ ತಿಳಿಸಿರುವ ಪ್ರಕಾರ ಶಂಕಿತ ಮಾವೋವಾದಿಗಳು ಇರಿಸಿದ್ದ ಸುದಾರಿತ ಸ್ಪೋಟಕ ಉಪಕರಣಕ್ಕೆ ಸಿಲುಕಿ ಮೃತಳಾಗಿದ್ದಾಳೆ.
ಸ್ಫೋಟ ಎಷ್ಟು ಭಯಾನಕವಾಗಿತ್ತೆಂದರೆ ಬಾಲಕಿಯ ಶರೀರ ತೀರಾ ನುಚ್ಚು ನೂರಾಗಿದೆಯೆಂದು ತಿಳಿದು ಬಂದಿದೆ. ಜಿಲ್ಲಾಪೊಲೀಸ್ ಅಧೀಕ್ಷಕ ಡಿ ಶ್ರವಣ್ ಅವರು"ಬಂಡಾ- ಗೋಲ್‌ಪಲ್ಲಿಯಲ್ಲಿ ಮುರಲಿಗುಡಾ ಬಳಿ ಗುರುವಾರ ಸಂಜೆ ಬಾಲಕಿ ಮೃತಳಾಗಿದ್ದಾಳೆ. ಬಾಲಕಿ ತನ್ನ ತಾಯಿಯೊಂದಿಗೆ ಕೋಂಟಾ ಎಂಬಲ್ಲಿಂದ ಮರಳುತ್ತಿದ್ದಳು" ಎಂದು ಘಟನೆಯ ಕುರಿತು ವಿವರಿಸಿದ್ದಾರೆ. ಕನ್ಹಾಯಿಗುಡಾದ ಎಂಟು ವರ್ಷದ ಮುಚಾಕಿ ಅನಿತಾ ಕೋಂಟಾದ ಡೊಡರಾದಲ್ಲಿನ ಕನ್ಯಾಆಶ್ರಮದ ಪ್ರಥಮ ದರ್ಜೆ ವಿದ್ಯಾರ್ಥಿನಿಯಾಗಿದ್ದಳು.ಅನಾರೋಗ್ಯದ ಕಾರಣದಿಂದ ತಾಯಿಯೊಂದಿಗೆ ಮನೆ ಮರಳಿ ಬರುತ್ತಿದ್ದಾಗ ರಸ್ತೆಯಲ್ಲಿ ಈ ಸ್ಫೋಟ ನಡೆದಿತ್ತೆಂದು ಪೊಲೀಸರು ತಿಳಿಸಿದ್ದಾರೆ.