×
Ad

ಭಾರತದ ಸಮಸ್ಯೆಗೆ ಯುವಕರು ಪರಿಹಾರ ಹುಡುಕಬೇಕು: ಪ್ರಣವ್

Update: 2016-03-21 23:33 IST

ಹೊಸದಿಲ್ಲಿ, ಮಾ.21: ಭಾರತವು ಸಮಗ್ರ ಅಭಿವೃದ್ಧಿಯ ಗುರಿ ಸಾಧಿಸುವಂತೆ, ದೇಶದ ಪ್ರಮುಖ ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಗೆ ಸೃಜನಶೀಲ ಪರಿಹಾರವನ್ನು ಕಂಡುಹಿಡಿಯಲು ಯುವ ಮನಸ್ಸುಗಳನ್ನು ಪ್ರಚೋದಿಸುವ ಅಗತ್ಯವಿದೆಯೆಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಭಾರತವು ತನ್ನ ಸಾಮಾಜಿಕ ಅಗತ್ಯಗಳನ್ನು ಪೂರೈಸಲು ತಂತ್ರಜ್ಞಾನದ ದಕ್ಷತೆಯನ್ನು ಹೆಚ್ಚಿಸುವ ಅಗತ್ಯವಿದೆಯೆಂದು ನಿನ್ನೆ ರಾಷ್ಟ್ರಪತಿ ಭವನದಲ್ಲಿ ಒಂದು ವಾರದ ಕಾಲ ನಡೆದ ಸಂಶೋಧನ ಉತ್ಸವದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮುಖರ್ಜಿ ಹೇಳಿದರೆಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಭಾರತವು ಒಂದು ಮಟ್ಟದ ತಂತ್ರಜ್ಞಾನ ಮುನ್ನಡೆಯನ್ನು ಸಾಧಿಸಿರಬಹುದು ಹಾಗೂ ಮುಖ್ಯವಾಗಿ ಯುವಕರು ಸಹಿತ ತನ್ನ ನಾಗರಿಕರ ಮನಸ್ಸುಗಳನ್ನು ವೈಜ್ಞಾನಿಕತೆಯತ್ತ ಒಲವನ್ನು ಹೆಚ್ಚಿಸಿಕೊಳ್ಳುವಂತೆ ಉತ್ತೇಜಿಸಿರಬಹುದು. ಆದರೆ, ಅವರಲ್ಲಿ ಬದ್ಧತೆ, ಶ್ರದ್ಧೆ, ಅನುಭೂತಿ ಶಕ್ತಿ ಹಾಗೂ ಸೂಕ್ಷ್ಮತೆಗಳು ಇಲ್ಲದಿದ್ದಲ್ಲಿ, ನಮ್ಮ ಸಂವಿಧಾನದಲ್ಲಿ ಹೇಳಿರುವ ಸಾಮಾಜಿಕ ಶಿಸ್ತು ಕೈತಪ್ಪುವುದೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News