24ರಿಂದ ನಾಲ್ಕು ದಿನ ಬ್ಯಾಂಕ್ ರಜೆ
Update: 2016-03-21 23:35 IST
ಹೊಸದಿಲ್ಲಿ, ಮಾ.21: ಮಾ.24 ಗುರುವಾರದಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್ ರಜೆ ಇರುವ ಕಾರಣ ಗ್ರಾಹಕರಿಗೆ ಬಿಸಿ ತಟ್ಟಲಿದೆ. ಈ ಅವಧಿಯಲ್ಲಿ ಆನ್‌ಲೈನ್‌ನಲ್ಲಿ ಮಾತ್ರ ವ್ಯವಹಾರ ಸಾಧ್ಯ. ಉತ್ತರ ಪ್ರದೇಶದಲ್ಲಿ ಬುಧವಾರದಿಂದಲೇ ಬ್ಯಾಂಕ್ ಬಂದ್ ಆಗಲಿದೆ.
ಗುರುವಾರ ಹೋಳಿ ಹಬ್ಬ, ಶುಕ್ರವಾರ ಗುಡ್‌ಫ್ರೈಡೆ, ಶನಿವಾರ ನಾಲ್ಕನೆ ಶನಿವಾರ, ರವಿವಾರ ವಾರದ ರಜೆ. ಈ ಕಾರಣಕ್ಕಾಗಿ ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣವನ್ನು ಹಿಂಪಡೆಯಲು ಎಟಿಎಂಗಳನ್ನು ಆಶ್ರಯಿಸಬೇಕಾಗಿದೆ. ಐಡಿಬಿಐ ಬ್ಯಾಂಕ್ ಮುಷ್ಕರದ ಕಾರಣದಿಂದಾಗಿ ಸೋಮವಾರ(ಮಾ.28) ರಜೆ ಇರುತ್ತದೆ. ಹೀಗಾಗಿ ಐಡಿಬಿಐ ಐದು ದಿನ ಬಂದ್ ಆಗಲಿದೆ.