ಜಾತೀಯತೆ ವಿರುದ್ಧ ಮಾತನಾಡಿದ ದಲಿತ ಮುಖಂಡ ಶವವಾಗಿ ಪತ್ತೆ
Update: 2016-03-22 16:33 IST
ಈರೊಡ್, ಮಾ.22: ಅಂತರ್ಜಾತಿಯ ವಿವಾಹದಿಂದಾಗಿ ಮಾ.13ರಂದು ಶಂಕರ್ ಎಂಬಾತನನ್ನು ಕೊಲೆ ಯಾಗಿದ್ದು, ಆ ನೋವು ಮಾಸುವ ಮೊದಲೇ ಜಾತೀಯತೆಯನ್ನು ವಿರೋಧಿಸಿದ ಮರುದಿನವೇ ದಲಿತ ನಾಯಕನ ಶವವು ಹತ್ತಿರದ ಬಾವಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ ಎಂದು ಚೆಲ್ಲಮ್ ಪಳಯಮ್ ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ.
‘ಚಿನ್ನಸ್ವಾಮಿ (45) ರವರು ಮೃತಪಟ್ಟ ವ್ಯಕ್ತಿಯಾಗಿದ್ದು, ದಲಿತ ವಿದ್ಯುತಲೈ ಕಚಿ’ ಸಂಘಟನೆಯ ನಾಯಕರಾಗಿದ್ದರು. ದೇವಸ್ಥಾನದ ಪರಿಸರದಲ್ಲಿ 19 ವರ್ಷದ ದಲಿತ ಬಾಲಕನನ್ನು ಮೇಲ್ಜಾತಿಯವರು ಜಾತಿನಿಂದನೆ ಮಾಡಿದ್ದಕ್ಕಾಗಿ, ಚಿನ್ನಸ್ವಾಮಿಯವರು ವಿರೋಧಿಸಿದ್ದರೆಂದು ತಿಳಿದುಬಂದಿದೆ.