ಭಾರತೀಯ ಕೆನಡಿಯನ್‌ಗೆ ಪ್ರತಿಷ್ಠಿತ ಶಾಂತಿ ಪ್ರಶಸ್ತಿ

Update: 2016-03-22 17:59 GMT

ಜೊಹಾನ್ಸ್‌ಬರ್ಗ್, ಮಾ. 22: ಶಾಂತಿ ಮತ್ತು ಮಾನವಹಕ್ಕುಗಳ ಶಿಕ್ಷಣಕ್ಕೆ ನೀಡಿರುವ ಉತ್ತೇಜನಕ್ಕಾಗಿ ಭಾರತೀಯ-ಕೆನಡಿಯನ್ ಡಾ. ಮುಹಮ್ಮದ್ ಕೇಶವ್‌ಜಿಗೆ ಪ್ರತಿಷ್ಠಿತ ಗಾಂಧಿ ಕಿಂಗ್ ಇಕೇಡ ಪ್ರಶಸ್ತಿಯನ್ನು ನೀಡಲಾಗುವುದು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಇಂಟರ್‌ನ್ಯಾಶನಲ್ ಚಾಪೆಲ್ ಅಮೆರಿಕದ ಅಟ್ಲಾಂಟದಲ್ಲಿ ಎಪ್ರಿಲ್ 5ರಂದು ಏರ್ಪಡಿಸುವ ವಾರ್ಷಿಕ ಶಾಂತಿ ಮತ್ತು ಅಂತರ್-ಧರ್ಮೀಯ ಸಮ್ಮೇಳನದಲ್ಲಿ ದಕ್ಷಿಣ ಆಫ್ರಿಕ ಸಂಜಾತನಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಮಾರ್ಟಿನ್ ಲೂಥರ್ ಕಿಂಗ್‌ರ 48ನೆ ಪುಣ್ಯತಿಥಿಯಂದು ನಡೆಯುವ ಸಮಾರಂಭದಲ್ಲಿ ಡಾ. ಮುಹಮ್ಮದ್ ಕೇಶವ್‌ಜಿ ಅವರು ಮಹಾತ್ಮಾ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಮತ್ತು ನೆಲ್ಸನ್ ಮಂಡೇಲರ ವ್ಯಕ್ತಿತ್ವಗಳ ಬಗ್ಗೆ ಭಾಷಣ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News