×
Ad

ಇರಾನ್‌ನಲ್ಲಿ ಪ್ರತಿಭಟನೆ ವೇಳೆ ಸಾವಿರಾರು ಜನರು ಮೃತಪಟ್ಟಿದ್ದಾರೆ ಎಂಬ ವರದಿ ಹಿಂದೆ ವಿದೇಶಿ ಹಿತಾಸಕ್ತಿಗಳ ಕೈವಾಡವಿದೆ: ಹಕೀಮ್ ಇಲಾಹಿ

Update: 2026-01-24 22:08 IST

PC : @NDTVWORLD

ಇರಾನಿನಲ್ಲಿ ಇತ್ತೀಚಿನ ಪ್ರತಿಭಟನೆಗಳ ಅಲೆಯ ಸಮಯದಲ್ಲಿ ಜನರು ಕೊಲ್ಲಲ್ಪಟ್ಟರು ಎಂದು ಇರಾನಿನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಒಪ್ಪಿಕೊಂಡರು, ಆದರೆ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ಅನಗತ್ಯ ಮತ್ತು ಅಸಮಾನ ಬಲ ಪ್ರಯೋಗಿಸಿದೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ.

ಪ್ರತಿಭಟನೆಯ ಸಂದರ್ಭ ಸಾವಿರಾರು ಜನರು ಮೃತಪಟ್ಟಿದ್ದಾರೆ ಎಂಬ ವರದಿಯ ಹಿಂದೆ ವಿದೇಶಿ ಹಿತಾಸಕ್ತಿಗಳ ಕೈವಾಡವಿದೆ ಎಂದವರು ಆರೋಪಿಸಿದ್ದಾರೆ. ಇರಾನ್ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ, ಆದರೆ ಕೆಲವರಿಗೆ ಅದು ಇಷ್ಟವಿಲ್ಲ. ಸರಕಾರವು ಜನರ ಬೇಡಿಕೆಗಳನ್ನು ಗಮನಿಸಿದ್ದು ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ಆದರೆ ಕೆಲವು ವಿಷಯಗಳು ಇರಾನಿನ ಕೈಯಲ್ಲಿಲ್ಲ. ದೇಶವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಆರ್ಥಿಕ ಸಂಕಷ್ಟಗಳಿಗೆ ಕಾನೂನು ಬಾಹಿರ ಅಂತಾರಾಷ್ಟ್ರೀಯ ನಿರ್ಬಂಧಗಳು ಕಾರಣವಾಗಿವೆ. ವಿದೇಶಿ ಶಕ್ತಿಗಳು ಇರಾನಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸುತ್ತಿದ್ದಾರೆ. ಕೆಲವು ಜನರು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದರೆ ಇತರರು ಈ ಅವಕಾಶವನ್ನು ತಮ್ಮ ಗುರಿ ಸಾಧಿಸಲು ಬಳಸಿಕೊಳ್ಳುತ್ತಿದ್ದಾರೆ' ಎಂದು ಇಲಾಹಿ ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News