×
Ad

ಹೊಸ ವಿಶ್ವಸಂಸ್ಥೆ ರಚನೆಗೆ ಟ್ರಂಪ್ ಪ್ರಯತ್ನ: ಬ್ರೆಝಿಲ್ ಅಧ್ಯಕ್ಷ ಲೂಲಾ ಆರೋಪ

Update: 2026-01-24 22:18 IST

PC : ndtv

ಬ್ರಸೀಲಿಯಾ, ಜ.24: ಪ್ರಸ್ತಾವಿತ `ಶಾಂತಿ ಮಂಡಳಿ'ಯ ಮೂಲಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವಿಶ್ವಸಂಸ್ಥೆಯನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬ್ರೆಝಿಲ್ ಅಧ್ಯಕ್ಷ ಲೂಯಿಜ್ ಇನಾಶಿಯೊ ಲೂಲಾ ಡ ಸಿಲ್ವ ಆರೋಪಿಸಿದ್ದಾರೆ.

ವಿಶ್ವಸಂಸ್ಥೆಯನ್ನು ಬಲಪಡಿಸುವ ಬದಲು ಟ್ರಂಪ್ ತಾನೊಬ್ಬನೇ ಮಾಲಕನಾಗಿರುವ ಹೊಸ ವಿಶ್ವಸಂಸ್ಥೆ ರಚಿಸಲು ಪ್ರಸ್ತಾಪಿಸಿದ್ದಾರೆ. ಟ್ವಿಟರ್ ಮೂಲಕ ಇಡೀ ಜಗತ್ತನ್ನು ಆಳಲು ಟ್ರಂಪ್ ಬಯಸಿದ್ದಾರೆ. ಇದು ಗಮನಾರ್ಹವಾಗಿದೆ. ಪ್ರತೀ ದಿನ ಅವರು ಏನಾದರೂ ಹೇಳುತ್ತಾರೆ ಮತ್ತು ಅವರು ಏನು ಹೇಳಿದರು ಎಂಬ ಬಗ್ಗೆ ಪ್ರತೀ ದಿನ ಜಗತ್ತು ಮಾತನಾಡುತ್ತದೆ' ಎಂದು ಲೂಲಾ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜಾಗತಿಕ ವ್ಯವಹಾರಗಳಲ್ಲಿ `ಕಾಡಿನ ನ್ಯಾಯ'ದ ಬದಲು ಬಹುಪಕ್ಷೀಯತೆಯನ್ನು ಸಮರ್ಥಿಸಿಕೊಂಡ ಲೂಲಾ, ವಿಶ್ವಸಂಸ್ಥೆಯ ಚಾರ್ಟರ್(ಸನದು) ಅನ್ನು ಹರಿದು ಹಾಕಲಾಗುತ್ತಿದೆ ಎಂದು ಎಚ್ಚರಿಸಿದರು. ಇದಕ್ಕೂ ಮುನ್ನ ಲೂಲಾಗೆ ಕರೆ ಮಾಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅಂತರಾಷ್ಟ್ರೀಯ ವ್ಯವಹಾರಗಳಲ್ಲಿ ವಿಶ್ವಸಂಸ್ಥೆಯ ಕೇಂದ್ರ ಪಾತ್ರವನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News