×
Ad

ವಿವಾದತ್ಮಕ ಹೇಳಿಕೆ: ಜೆಡಿಯು ಶಾಸಕರ ಅಮಾನತು

Update: 2016-03-22 23:35 IST

ಪಾಟ್ನಾ,ಮಾ. 22: ಜೆಡಿಯು ವಿವಾದತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಆಡಳಿತರೂಢ ಜೆಡಿಯು ಪಕ್ಷದ ಶಾಸಕರಾದ ನರೇಂದ್ರ ಕುಮಾರ್ ಅಲಿಯಾಸ್ ಗೋಪಾಲ್ ಮಂಡಲ್ ಹಾಗೂ ರಾಣಾ ಗಂಗೇಶ್ವರ್‌ರವರನ್ನು ಇಂದು ಪಕ್ಷದಿಂದ ತಕ್ಷಣದಿಂದಲೇ ಜಾರಿಗೊಳ್ಳುವಂತೆ ಅಮಾನತುಗೊಳಿಸಲಾಗಿದೆ ಮತ್ತು ಹೇಳಿಕೆಯ ವಿವರಣೆ ಕೋರಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಭಾಗಲ್ಪುರ್ ಜಿಲ್ಲೆಯ ಗೋಪಾಲ್‌ಪುರದ ವಿಧಾನಸಭೆ ಕ್ಷೇತ್ರದಿಂದ ಐದನೆ ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಗೋಪಾಲ್ ಮಂಡಲ್,ರವಿವಾರ ಜೆಡಿಯು ನಾಯಕತ್ವದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.ಅವರು ಮತ್ತು ಅವರ ಬೆಂಬಲಿಗರು ಸೇರಿ ರಾಜಕೀಯ ಹತ್ಯೆ ಮಾಡುವುದಾಗಿ ವಿವಾದತ್ಮಕ ಹೇಳಿಕೆ ನೀಡಿದ್ದರು. ನಾಮನಿರ್ದೇಶಿತ ವಿಧಾನ ಪರಿಷತ್ ಸದಸ್ಯ ರಾಣಾ ಗಂಗೇಶ್ವರ್ ಕೂಡ ಇಂದು ಸಮಸ್ತಿಪುರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರ ಗೀತೆಗೆ ಅಗೌರವ ತೋರಿದ್ದಾರೆ ರಾಷ್ಟ್ರ ಗೀತೆಯು ಯಾರೆಲ್ಲಾ ರಾಷ್ಟ್ರವನ್ನು ಆಳ್ವಿಕೆ ನಡೆಸಿದ್ದಾರೋ ಅವರನ್ನು ಹೊಗಳಿಕೆ ಮಾಡುವುದಾಗಿದೆ ಎಂದು ಹೇಳಿದೆ.
ವಿವಾದತ್ಮಾಕ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಯು, ಇಬ್ಬರು ಶಾಸಕರಿಗೆ ವಿವಾದತ್ಮಾಕ ಹೇಳಿಕೆಯ ಕುರಿತು ವಿವರಣೆ ನೀಡುವಂತೆ ಶೋಕಾಸ್ ನೋಟಿಸ್ ಜಾರಿಮಾಡಿದೆ. ಅಲ್ಲದೇ, ತಕ್ಷಣದಿಂದಲೇ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಬಶಿಷ್ತ ನಾರಾಯಣ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News