×
Ad

ಮಧ್ಯಮ ವರ್ಗದ ‘ಅಚ್ಛೇ ದಿನ್’ಗೆ ಕಾಲವಿನ್ನೂ ಕೂಡಿ ಬಂದಿಲ್ಲ

Update: 2016-03-23 23:44 IST

ಹೊಸದಿಲ್ಲಿ, ಮಾ.23: ಕಳೆದೆರಡು ವರ್ಷಗಳಿಂದ ದೇಶದಲ್ಲಿ ಹೆಚ್ಚುತ್ತಿರುವ ಶಿಕ್ಷಣ ಹಾಗೂ ಆರೋಗ್ಯ ಸೇವಾ ವೆಚ್ಚಗಳು ಮಧ್ಯಮ ವರ್ಗಕ್ಕೆದೊಡ್ಡ ಹೊಡೆತವನ್ನೇ ನೀಡಿದ್ದು ಸದ್ಯೋಭವಿಷ್ಯದಲ್ಲಿ ನಡೆಯಲಿರುವ ಹಲವಾರು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಅಚ್ಛೇ ದಿನ್ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನೂ ಕುಂದಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

  ‘‘ಮಧ್ಯಮ ವರ್ಗದಜನರು ಹೆಚ್ಚಾಗಿ ಉಪಯೋಗಿಸುವಂತಹ ಉತ್ಪನ್ನಗಳು ಹಾಗೂ ಸೇವೆಗಳ ಹೆಚ್ಚುತ್ತಿರುವ ದರಗಳ ವಿಚಾರವನ್ನು ಕಡೆಗಣಿಸಲು ಸಾಧ್ಯವೇಇಲ್ಲ,’’ ಎಂದು ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಸಮಸ್ಯೆಯನ್ನು ಅಲ್ಪಾವಧಿಯಲ್ಲಿ ಪರಿಹರಿಸಲುಅಸಾಧ್ಯವಾದರೂ ಸರಕಾರ ಇದೀಗ ತನ್ನ ಸುಮಾರು 10 ಮಿಲಿಯನ್ ನೌಕರರ ವೇತನವನ್ನು ಶೇ. 24ರಷ್ಟು ಹೆಚ್ಚಿಸುವ ಬಗ್ಗೆ ಯೋಚಿಸುತ್ತಿದೆ.
ಪ್ರಸಕ್ತ ಶಿಕ್ಷಣ ವೆಚ್ಚ ಶೇ.13ರಷ್ಟು ಏರಿಕೆಯಾಗಿದ್ದರೆ, ಗೃಹ ನಿರ್ಮಾಣ ವೆಚ್ಚಗಳು ಶೇ.10ರಷ್ಟು ಏರಿಕೆಯಾಗಿವೆ. ಅದೇ ಸಮಯಆರೋಗ್ಯ ಸೇವಾ ವೆಚ್ಚಗಳು ಶೇ. 14ರಷ್ಟು ಏರಿಕೆ ಕಂಡರೆ, ವಿದ್ಯುತ್‌ದರ ಶೇ. 8ರಷ್ಟು ಹೆಚ್ಚಾಗಿದೆಯೆಂದುಅಂಕಿಸಂಖ್ಯೆಗಳ ಸಚಿವಾಲಯದಿಂದ ಪಡೆದ ಮಾಹಿತಿ ತಿಳಿಸುತ್ತದೆ.
ನಗರ ಪ್ರದೇಶಗಳ ಕುಟುಂಬಗಳು ತಮ್ಮ ಮಾಸಿಕ ಆದಾಯದ ಶೇ. 7ರಷ್ಟನ್ನು ಶಿಕ್ಷಣದ ಉದ್ದೇಶಗಳಿಗೆ ಬಳಸುತ್ತವೆಯಾದರೆ ಗ್ರಾಮೀಣ ಕುಟುಂಬಗಳು ತಮ್ಮ ಮಾಸಿಕ ಆದಾಯದ ಶೇ. 3.5ರಷ್ಟನ್ನು ಶಿಕ್ಷಣಕ್ಕಾಗಿ ಉಪಯೋಗಿಸುತ್ತಿವೆ.

ಕೆಲವು ಆಹಾರ ಹಾಗೂ ಪಾನೀಯಗಳ ಬೆಲೆ ಮೋದಿ ಸರಕಾರ ಬಂದ ನಂತರ ಶೇ.0.5ರಷ್ಟು ಕಡಿಮೆಯಾಗಿದ್ದರೂ, ಮಧ್ಯಮ ವರ್ಗದಿಂದ ಹೆಚ್ಚಿನ ಬೇಡಿಕೆಯಿರುವ ಹಾಲು ಹಾಗೂ ಮೊಟ್ಟೆಗಳ ದರ ಹೆಚ್ಚಾಗಿದೆ.
ಮೊಟಾರ್ ಸೈಕಲ್ ಹಾಗೂ ಕಾರುಗಳ ಮಾಲಕರೂ ಸರಕಾರದ ನೀತಿಗಳಿಂದ ಅಸಂತುಷ್ಟರಾಗಿದ್ದಾರೆ.ಕುಸಿಯುತ್ತಿರುವ ತೈಲ ಬೆಲೆಗಳು ಅವರಿಗೆ ಸಂತಸತಂದಿತ್ತಾದರೂ ಈ ಸಂತಸವನ್ನು ಸರಕಾರತೆರಿಗೆಯರೂಪದಲ್ಲಿಕಿತ್ತೆಸೆದಿದೆ.
ಪಿಂಚಣಿ ನಿಧಿಯ ಮೇಲೆ ತೆರಿಗೆ ವಿಧಿಸುವತನ್ನ ಪ್ರಸ್ತಾಪವನ್ನು ವ್ಯಾಪಕ ವಿರೋಧದಿಂದಾಗಿ ಸರಕಾರ ಹಿಂತೆಗೆದುಕೊಂಡಿದೆಯಾದರೂ ಇದರಿಂದ ಜನರನ್ನು ಸಂತುಷ್ಟಗೊಳಿಸಲು ಅದಕ್ಕೆ ಸಾಧ್ಯವಾಗಿಲ್ಲ.
ಲೋಕಸಭಾ ಚುನಾವಣೆ ಇನ್ನೂ ಮೂರು ವರ್ಷಗಳಷ್ಟು ದೂರವಿದ್ದರೂ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಮುಂದಿನ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದ್ದರೆ, ಮಹತ್ವದಉತ್ತರಪ್ರದೇಶ ಚುನಾವಣೆ ಮುಂದಿನ ವರ್ಷ ನಡೆಯಲಿವೆ.
ಮಧ್ಯಮ ವರ್ಗದ ಹತಾಶೆಯ ಬಗ್ಗೆ ಚೆನ್ನಾಗಿ ಅರಿತಿರುವ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಗ್ರಾಹಕ ಹಣದುಬ್ಬರವನ್ನು ಮಾರ್ಚ್ 2017ರ ವೇಳೆಗೆ ಶೇ. 5ರಷ್ಟು ಕಡಿಮೆಗೊಳಿಸಲು ಆರ್‌ಬಿಐ ಕಂಕಣಬದ್ಧವಾಗಿದೆಯೆಂದು ಇತ್ತೀಚೆಗೆ ತಿಳಿಸಿದ್ದರು. ಎಪ್ರಿಲ್ 5ರಂದು ತನ್ನ ಪಾಲಿಸಿ ಬಡ್ಡಿದರವನ್ನು 25 ಬೇಸಿಸ್ ಅಂಕಗಳಷ್ಟು ಆರ್‌ಬಿಐ ಕಡಿತಗೊಳಿಸಬಹುದೆಂದು ಅಂದಾಜಿಸಲಾಗಿದೆ. ಕಳೆದ ವರ್ಷ ಈ ದರವನ್ನು 125 ಅಂಕಗಳಷ್ಟು ಕಡಿಮೆಗೊಳಿಸಲಾಗಿತ್ತಲ್ಲದೆ ಇದು ಹಣದುಬ್ಬರವನ್ನು ಕಡಿಮೆಗೊಳಿಸುವಲ್ಲಿಯೂ ಸಹಕಾರಿಯಾಗಿತ್ತು.
ಸಾಲದ ಮೇಲಿನ ಬಡ್ಡಿದರವನ್ನು ಆರ್‌ಬಿಐ ಕಡಿಮೆಗೊಳಿಸಬಹುದೆಂಬ ಮಧ್ಯಮ ವರ್ಗಆಶಾಭಾವನೆ ಹೊಂದಿದೆಯಾದರೂಅದು ಸದ್ಯದಲ್ಲಿ ನಿಜವಾಗುವ ಸಾಧ್ಯತೆಯಿಲ್ಲ.
ಮೋದಿ ಸರಕಾರದ ವಿರುದ್ಧ ಮಧ್ಯಮ ವರ್ಗಕ್ಕೆ ಹಲವು ದೂರುಗಳಿವೆ. ಆದರೂ ಹಲವರು ಮೋದಿಗೆ ಸಮಸ್ಯೆಗಳನ್ನು ಪರಿಹರಿಸಲುಇನ್ನೂ ಸ್ವಲ್ಪ ಕಾಲಾವಕಾಶ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News