×
Ad

ಕಾಶ್ಮೀರ ಸಮಸ್ಯೆಯಲ್ಲಿ ವಾಜಪೇಯಿ ದಾರಿಯಲ್ಲಿ ಸರಕಾರ ಮುಂದೆ ಸಾಗಲಿ: ಹುರಿಯತ್ ಕಾನ್ಫ್ರೆನ್ಸ್

Update: 2016-03-24 14:53 IST

ಹೊಸದಿಲ್ಲಿ, ಮಾರ್ಚ್.24: ಹುರಿಯತ್ ಕಾನ್ಪ್ರೆನ್ಸ್(ಎಂ) ಅಧ್ಯಕ್ಷ ಮಿರ್‌ವೈಝ್ ಉಮರ್ ಫಾರೂಕ್ ಬುಧವಾರ ಭಾರತ ಸರಕಾರ ಮಾನವೀಯ ಮಾನದಂಡದಲ್ಲಿ ವಿವಾದವನ್ನು ಬಗೆಹರಿಸಲು ವಾಜಪೇಯಿ ಅನುಸರಿಸಿದ ದಾರಿಯಲ್ಲಿ ಮೋದಿ ಸರಕಾರ ಸಾಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿ ಮಾತಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಉಭಯ ದೇಶಗಳ ನಡುವೆ ಸಮಗ್ರ ಮಾತುಕತೆಗಳು ನಡೆಯ ಬೇಕು ಮತ್ತು ಇದರಲ್ಲಿ ಕಾಶ್ಮೀರಿಗರನ್ನೂ ಸೇರಿಸಿಕೊಳ್ಳಬೇಕೆಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

 ದಿಲ್ಲಿಯಲ್ಲಿ ಪಾಕಿಸ್ತಾನದ ಹೈಕಮಿಶನರ್ ಅಬ್ದುಲ್ ಬಾಸಿತ್ ಕರೆಯೋಲೆಯಂತೆ ಪಾಕಿಸ್ತಾನಿ ದಿನಾಚರಣೆಗೆ ಸಂಬಂಧಿಸಿ ನಡೆದ ಕಾರ್ಯಕ್ರಮಕ್ಕಾಗಿ ಶೀನಗರದಿಂದ ಹೊರಡುವ ವೇಳೆ ಮೀರ್‌ವೈರ್ ಫಾರೂಕ್‌ರು ಹುರಿಯತ್ ಕಾನ್ಫ್ರೆನ್ಸ್ ಯಾವುದೇ ದೇಶ ಅಥವಾ ರಾಷ್ಟ್ರ ವಿರೋಧಿಯಲ್ಲ. ನಾವು ಸದಾ ಭಾರತ ಪಾಕಿಸ್ತಾನದ ನಡುವಿನ ಮಾತುಕತೆಯನ್ನು ಸ್ವಾಗತಿಸುತ್ತಾಬಂದಿದ್ದೇವೆ ಎಂದು ಹೇಳಿರುವುದಾಗಿ ವರದಿಯಾಗಿದೆ. ನಮಗೆ ಎರಡು ದೇಶಗಳು ತಮ್ಮ ನಡುವೆ ನಡೆಯುವ ಮಾತುಕತೆಗಳಲ್ಲಿ ಕಾಶ್ಮೀರಿ ಜನರನ್ನು ಸೇರಿಸುವ ರೀತಿಯನ್ನು ಅನುಸರಿಸು ಸಾಧ್ಯತೆಯನ್ನು ವಿಕಸಿಸುವುದು ಎಂಬ ನಿರೀಕ್ಷೆ ತನಗಿದೆ ಎಂದಿರುವ ಮೀರ್‌ವೈರ್, ಅಟಲ್ ಬಿಹಾರಿ ವಾಜಪೇಯಿ ದೃಷ್ಟಿಕೋನದೊಂದಿಗೆ ಮುಂದೆ ಸಾಗಬೇಕಾಗಿದೆ. ಮಾನವೀಯ ದೃಷ್ಟಿಯಿಂದ ಸಮಸ್ಯೆ ಬಗೆಹರಿಸುವ ಮಾನದಂಡವನ್ನು ಅನುಸರಿಸಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೀರ್‌ವೈರ್ರು ಹೊಸದಿಲ್ಲಿಯಲ್ಲಿ ಪಾಕಿಸ್ತಾನ ದಿನಾಚರಣೆ ಸಮಾರಂಭದಲ್ಲಿ ಪ್ರತ್ಯೇಕತಾ ವಾದಿ ನಾಯಕರ ಉಪಸ್ಥಿತಿಯ ಕುರಿತು ವಿರೋಧವನ್ನು ಅಲ್ಲಗಳೆದು ನಾವು ಯಾವಾಗಲು ಪಾಕಿಸ್ತಾನದ ಹೈಕಮಿಶನರ್ ಕರೆಯೋಲೆಯಂತೆ ಆಗಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ನಾವು ಅಲ್ಲಿಗೆ ನಮ್ಮ ದೃಷ್ಟಿಕೋನವನ್ನು ಅವರ ಮುಂದೆ ಇರಿಸಲು ಹೋಗುತ್ತೇವೆ. ಯಾರನ್ನೂ ವಿರೋಧಿಸಲಿಕ್ಕಲ್ಲ ಎಂದು ಅವರು ಹೇಳಿದ್ಧಾರೆ. ಸುಮಾರು 150ಕ್ಕೂ ಅಧಿಕ ಪ್ರತ್ಯೇಕತಾ ವಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದಿಲ್ಲಿಗೆ ತಲುಪಿದ್ದಾರೆ. ಜೆಕೆಎಲ್‌ಎಫ್ ಅಧ್ಯಕ್ಷ ಯಾಸೀನ್ ಮಲಿಕ್ ಕಾರಣಾಂತರಗಳಿಂದ ಕಾರ್ಯಕ್ರಮಗಳಲ್ಲಿ ಾಗವಹಿಸುತ್ತಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News