×
Ad

ಬಿಲಿವರ್ಸ್ ಚರ್ಚ್ ಪರಮಾಧ್ಯಕ್ಷರು ಮತ್ತು ಪ್ರಧಾನಿ ಮೋದಿ ಭೇಟಿ ಈಗ ವಿವಾದದಲ್ಲಿ!

Update: 2016-03-24 16:41 IST

ಹೊಸದಿಲ್ಲಿ, ಮಾರ್ಚ್.24: ಬಿಲಿವರ್ಸ್ ಚರ್ಚ್‌ನ ಪರಮಾಧ್ಯಕ್ಷರಾದ ಡಾ.ಕೆ.ಪಿ. ಯೋಹಾನ್ನನ್ ಮೈತ್ರೋಪ್ಪೊಲಿತ್ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಗೃಹದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದು ಬಹುದೊಡ್ಡ ಸುದ್ದಿಯಾಗಿತ್ತು. 25 ನಿಮಿಷಗಳ ಕಾಲ ಅವರಿಬ್ಬರೂ ಸಮಾಲೋಚಿಸಿದ್ದರು. ಡಾ.ಕೆ.ಪಿ. ಯೋಹಾನ್ನನ್ ರೊಂದಿಗಿನ ಭೇಟಿ ಅದ್ಭುತವಾಗಿತ್ತೆಂದು ನಂತರ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು. ರಾಷ್ಟ್ರನಿರ್ಮಾಣಕ್ಕೆ ಸಭೆ ನಡೆಸುತ್ತಿರುವ ಕೆಲಸಗಳು ಅಭಿನಂದನಾರ್ಹವಾಗಿದೆಯೆಂದೂ ಯುವಕರ ಉನ್ನತಿಗೂ ಮೌಲಾಧಿಷ್ಠಿತ ವಿದ್ಯಾಭ್ಯಾಸಕ್ಕೂ ಸಭೆ ಆದ್ಯತೆ ನೀಡುತ್ತಿದೆ ಎಂದು ಮೋದಿ ಹೇಳಿದ್ದಾರೆಂದು ಬಿಲಿವರ್ಸ್ ಚರ್ಚ್ ವಿವರಿಸಿತ್ತು. ಬಿಲಿವರ್ಸ್ ಚರ್ಚ್ ಈವರೆಗೆ ಇಪ್ಪತ್ತೆಂಟು ಸಾವಿರ ಶೌಚಾಲಯಗಳು ಬಡವರಿಗೆ ಸಹಾಯ ಮಾಡುವುದಕ್ಕಾಗಿದೆಯೆಂದು ಪ್ರಧಾನಿ ಹೇಳಿದ್ದಾರೆಂದೂ ವಾದ ಹುಟ್ಟಿಕೊಂಡಿತ್ತು. ಯಾರಿಗೂ ತಿಳಿಯದೆ ಈ ಭೇಟಿ ನಡೆದಿತ್ತು. ರಾಜ್ಯಸಭಾ ಉಪಾಧ್ಯಕ್ಷ ಫ್ರೊ. ಬೆ.ಜೆ. ಕುರಿಯನ್ ಪ್ರಧಾನಿ ಮತ್ತು ಯೋಹಾನ್ನ ಭೇಟಿಗೆ ವ್ಯವಸ್ಥೆ ಮಾಡಿದ್ದರು.

ವಾಸ್ತವದಲ್ಲಿ ಯೋಹನ್ನನ್‌ರಿಗೆ ಈ ಭೇಟಿಯಲ್ಲಿ ಸ್ವಾರ್ಥಉದ್ದೇಶವಿತ್ತೆನ್ನಲಾಗುತ್ತಿದೆ. ಪ್ರಧಾನಿಯ ಪ್ರಶಂಸೆ ಹೊರಬೀಳುವುದರೊಂದಿಗೆ ಯೋಹಾನ್ನನ್‌ರ ನೈಜ ಚಿತ್ರವನ್ನು ವಿವರಿಸಿ ರಾಷ್ಟ್ರೀಯ ದಿನ ಪತ್ರಿಕೆಯೊಂದು ಲೇಖನ ಬರೆಯಿತು. ಕೆನಡಾ ಮತ್ತು ಅಮೆರಿಕದಲ್ಲಿ ಯೋಯನ್ನನ್ ಜನರನ್ನು ವಂಚಿಸಿ ಕೋಟ್ಯಂತರ ಹಣವನ್ನು ಭಾರತಕ್ಕೆ ಹರಿಯುವಂತೆ ಮಾಡುವ ವಂಚನೆ ಇದೆಂದು ಆ ಪತ್ರಿಕೆ ಬರೆಯಿತು. ಅಮೆರಿಕದಲ್ಲಿ ಕೇಸು ಹಾಕಿರುವುದನ್ನು ಇನ್ನೊಂದು ಆನ್‌ಲೈನ್ ಪತ್ರಿಕೆ ವರದಿಮಾಡಿತ್ತು. ಯೋಹಾನ್ನನ್ನ ಫಂಡ್ ವಂಚನೆ ಹೇಗೆ ನಡೆಸಿದ್ದಾರೆಂಬುದನ್ನು ರಾಷ್ಟ್ರೀಯ ಪತ್ರಿಕೆ ಬರೆಯಿತು. ಆನಂತರ ಆರೆಸ್ಸೆಸ್ ಮುಖಪತ್ರಿಕೆ ಕೂಡಾಯೋಹಾನ್ನನ್ ವಿರುದ್ಧ ಲೇಖನ ಬರೆಯಿತು. 2004ರಲ್ಲಿ ಬಿಜೆಪಿಯ ಸೋಲು ಮತ್ತು ವ್ಯಾಟಿಕನ್‌ನ ಮಾನಸ ಪುತ್ರಿ ಸೋನಿಯಾರ ವಿಜಯವನ್ನು ದೇವನ ಮಧ್ಯಸ್ಥಿಕೆ ಎಂದು ಭಾವಿಸಿದ್ದ ವ್ಯಕ್ತಿ ಯೋಹಾನ್ನನ್ ಆಗಿದ್ದಾರೆ. ಇದೇ ಯೋಹಾನ್ನನ್ ಈಗ ನರೇಂದ್ರ ಮೋದಿ ಅಭಿಮಾನಿಯಾಗಿದ್ದಾರೆ. ಈ ನಡುವೆ ಪತ್ರಿಕೆಗಳಲ್ಲಿ ತನ್ನ ಸುದ್ದಿ ಪ್ರಕಟವಾಗುವುದರೊಂದಿಗೆ ಗಂಗಾಶುಚೀಕರಣಕ್ಕೆ ಯೋಹಾನ್ನನ್ ಕೊಡುಗೆ ನೀಡಿದ್ದು ಯಾಕೆಂದು ಮೋದಿಗೆ ಮನವರಿಕೆಯಾಗಿತ್ತು. ಅಮೆರಿಕದ ಕೇಸ್‌ನಿಂದ ದೂರವಿಡಲು ಕೊನೆಯ ತಂತ್ರವಾಗಿ ಮೋದಿಯನ್ನು ಬಳಸಿಕೊಳ್ಳಲು ಅವರು ನೋಡದರೆಂದು ಹೇಳಲಾಗುತ್ತಿದೆ. ಮೋದಿಯೊಂದಿಗಿರುವ ಚಿತ್ರವನ್ನು ತೋರಿಸಿ ಅಮೆರಿಕದಲ್ಲಿ ತನ್ನ ಪ್ರಭಾವವನ್ನು ಬೀರುವುದು ಅವರ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ. ಅಮೆರಿಕಕ್ಕೆ ಯಾವಾಗ ಹೋದರು ಬಂಧನಕ್ಕೊಳಗಾಗುವ ಭೀತಿಯನ್ನು ಯೋಹಾನ್ನನ್ ಎದುರಿಸುತ್ತಿದ್ದಾರೆ. ಇದೆಲ್ಲ ಮನಗಂಡು ಯೋಹಾನ್ನನ್ ಮೋದಿಯ ಪ್ರಭಾವವನ್ನು ಬಳಸಿಕೊಳ್ಳಲು ತಂತ್ರ ರೂಪಿಸಿದರೆಂದು ವರದಿಗಳು ತಿಳಿಸಿವೆ.

ಬಡವರ ಹೆಸರು ಹೇಳಿ ಹಣಕಲೆಕ್ಷನ್ ಮಾಡಿ ವಂಚಿಸಲಾಗಿದೆ ಎಂದು ಯೋಹಾನ್ನನ್ ಮತ್ತು ಕುಟುಂಬದ ಮೇಲೆ ಆರೋಪ ಹೊರಿಸಲಾಗಿದೆ. ಅಮೆರಿಕನ್ ಕೋರ್ಟು ಈ ಆರೋಪವನ್ನು ಗಂಭೀರವಾಗಿಯೇ ಪರಿಗಣಿಸಿದೆ. 2790 ಕೋಟಿ ರೂಪಾಯಿಯನ್ನು ಅಮೆರಿಕದಿಂದ ಭಾರತಕ್ಕೆ ಕಳುಹಿಸಲಾಗಿದೆ ಎಂದು ಯೋಹನ್ನನ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಮಾಜ ಸೇವೆಗಾಗಿ ಈ ಹಣವನ್ನು ಸಂಗ್ರಹಿಸಿ ವ್ಯಾಪಾರ ಆವಶ್ಯಕತೆಗಳಿಗೆ ವಿನಿಯೋಗಿಸಿದ್ದಾರೆನ್ನಲಾಗುತ್ತಿದೆ. ಧಾರ್ಮಿಕ ಸಂಘಟನೆಯೆಂಬ ರೀತಿಯಲ್ಲಿ ಡಾ. ಕೆ.ಪಿ. ಯೋಹನ್ನನ್ ಮೈತ್ರಾಪ್ಪೋತ್ತರ ಸ್ವಂತ ಗೋಸ್ಫಲ್ ಫಾರ್ ಏಷ್ಯಕ್ಕೆ ಅಮೆರಿಕದಲ್ಲಿಯೂ ಬೇರುಗಳಿವೆ. ಸಮಾಜಸೇವಾ ಸಂಘಟನೆ ಎಂಬ ಪದವಿ ಇದಕ್ಕೆ ಅಮೆರಿಕದಲ್ಲಿದೆ. ವಿವಿಧ ವ್ಯಕ್ತಿಗಳಿಂದ ಭಾರಿ ಹಣ ಸಂಗ್ರಹ ಗೋಸ್ಫಲ್ ಫಾರ್ ಏಷ್ಯ ನಡೆಸಿದೆ. ಆಧ್ಯಾತ್ಮಿಕತೆ ಮತ್ತುಸಮಾಜಸೇವೆ ಹೆಸರಲ್ಲಿ ಹಣ ಸಂಗ್ರಹಿಸಲಾಗುತ್ತಿತ್ತು.2007ರಿಂದ 2013ರ ನಡುವೆ ಅಮೆರಿಕದಿಂದ 2780ಕೋ.ರೂಪಾಯಿ ಹಣ ಸಂಗ್ರಹಿಸಲಾಗಿತ್ತೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News